ನೆಮ್ಮದಿ ಆರೋಗ್ಯ ಬೇಕು ಬದುಕಲ್ಲಿ....
ಉತ್ತಮ ಊಟವು ನಡಿಗೆಯು ಸ್ವಲ್ಪ
ನಿತ್ಯವು ವ್ಯಾಯಾಮ ದೇಹಕೆ ಕಲ್ಪ
ಬತ್ತದ ಆರೋಗ್ಯ ಬದುಕಲಿ ಇರಲು
ಸುತ್ತಲು ಸಂತಸ ನೆಮ್ಮದಿ ಸಿಗಲು..
ಮಾನವ ಬಾಳಲಿ ನಿದ್ರೆಯು ಉತ್ತಮ
ದೊರಕುತ ಕಣ್ಣು ಮನ ದೇಹಕೆ ಆರಾಮ
ಸಣ್ಣ ಒತ್ತಡ ಆತಂಕ ನೋವು ನಿತ್ಯ ನರಕವು
ಓಡುವ ಕ್ಷಣವಿದು ಓಡಲು ಭಯಾನಕವು!
ವೇಗದ ಓಟದಿ ಇಲ್ಲವು ತನುವಿಗೆ ವಿಶ್ರಾಂತಿ
ಯೋಗದ ಮಹತ್ವ ತಿಳಿದವ ಕೋಟ್ಯಾಧಿಪತಿ
ಉತ್ತಮ ಅಭ್ಯಾಸದಿ ಬದುಕಿನ ಏರುಗತಿ
ಸಾವಯವ ತರಕಾರಿ, ಮನೆ ಆಹಾರ ಸದ್ಗತಿ!
ಮೋಸದ ಹಾದಿಯ ದೂರವೆ ಬಿಡುತಲಿ
ತೋಷವ ಹಂಚುತ ಬೆರೆಯುತ ನಡುವಲಿ
ಘೋಷದಿ ಕೂಗುತ ನೆಮ್ಮದಿ ಉಸಿರಲಿ
ಹಿರಿಯರ ಸೇವೆಯ ಮಾಡುತ ಮನೆಯಲಿ
ದುಷ್ಟ ಚಟಗಳಲಿ ಬೆರೆತರೆ ಕೆಡುವೆ
ಶಿಷ್ಟಾಚಾರವ ಕಲಿತೊಡೆ ಮೆರೆವೆ
ಜಗದಲಿ ಮೂರು ದಿನ ನಮ್ಮಯ ಬಾಳ್ವೆ
ನಗುತಲಿ ಕಳೆಯಲು ಅಂದದಿ ಬಾಳುವೆ..
@ಹನಿಬಿಂದು@
15.02.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ