ಪಯಣ
ಅತ್ತಲು ಇತ್ತಲು ಸುತ್ತಲು ಮುತ್ತಲು
ಕತ್ತಲು ಹಗಲಲು ಸಂಜೆ ಬೆಳಕಲು
ಸಾಗುತ ಜೀವನ ಯಾನ ಮುಂದಕೆ
ತೊರೆದು ಸಾವಿರ ನೆನಪ ಹಿಂದಕೆ
ಬಾನಿನ ಆಚೆಗೂ ಭೂಮಿಯ ಒಳಗೂ
ಸಾಗರದಾಳಕು ಮೋಡದವರೆಗೂ
ನೀರು, ಗಾಳಿ, ಮಣ್ಣು ಆಕಾಶ
ಎಲ್ಲಾ ಕಡೆಯೂ ಇವೆ ಅವಕಾಶ
ಹೋಗುತ ಬರುತ ತಿರುಗುತ ನಡೆಯುತ
ಆಚೆಗೂ ಈಚೆಗೂ ಮೇಲಕು ಕೆಳಕೂ
ಸಾಗರದಾಚೆಗೂ ಬಾನಿನ ತುದಿಗೂ
ಹಿಮದ ಪರ್ವತಕು ಜಲದ ಬುಡಕೂ
ಸಾಗಿದೆ ಯಾನ ಸಾವಿನ ಕಡೆಗೂ
ಕ್ಷಣ ಕ್ಷಣ ಬೆಳೆಯುತ ದೇವನ ಎಡೆಗೂ
ಸಾಧನೆ ಮಾಡುತ ಪರರನು ಆಡುತ
ಸೋಲನು ಗೆಲ್ಲುತ ಪ್ರೀತಿಗೆ ಸೋಲುತ
ಸಾಗಿದೆ ಪಯಣ ಮೌನದ ಕಡೆಗೂ
@ಹನಿಬಿಂದು@
05.04.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ