ಶುಭವಾಗಲಿ
ಶುಭವಾಗಲಿ ನಿಮಗೆ ಶುಭವಾಗಲಿ
ಜನುಮ ದಿನದ ಸಂತಸವು ಸವಿಯಾಗಲಿ
ಬದುಕೆಂಬ ಕಾಲುವೆಯು ಶುಚಿಯಾಗಿ ಇರಲಿ
ಸುಖವೆಂಬ ದೋಣಿಯು ತೇಲುತಿರಲಿ
ಶಿಸ್ತನ್ನು ತಾ ಗೆದ್ದು ಸರ್ವರ ಮನಗೆದ್ದು
ಮಸ್ತಕದಿ ಜ್ಞಾನವನು ತುಂಬಿಕೊಂಡಿದ್ದು
ಕಷ್ಟ ಕಾರ್ಪಣ್ಯಗಳ ಮೆಟ್ಟಿ ನಿಂತಿದ್ದು
ಶಿಷ್ಟರ ಸಂಘದಲಿ ಕ್ಷಣವೂ ನಗುತ್ತಿದ್ದು
ರೋಗ ರುಜಿನಗಳ ಕಂತೆ ದೂರವೇ ಉಳಿದಿರಲಿ
ಸಕಲ ದುರಿತಗಳ ಚಿಂತೆ ನಾಶವಾಗಲಿ
ನೋವ ಅಂಶಗಳೆಲ್ಲ ನೀಗಿ ಹೋಗಿ ಬಿಡಲಿ
ಕ್ಷಣ ಕ್ಷಣದ ಖುಷಿಯೂ ನಿಮ್ಮದಾಗಲಿ
ಬಾಳೆಂಬ ಪಯಣದಲಿ ಜೊತೆಗಾರರು ನಾವು
ಶಾಲೆಯೆಂಬ ದೇಗುಲದಿ ಜೊತೆ ಸೇರಿದವರು
ಕೆಲಸದ ನೊಗ ಹೊತ್ತು ಸಾಗುತಿದೆ ಬದುಕಿನಲ್ಲಿ
ಜನುಮ ದಿನಾಕಿದೋ ಶುಭಾಶಯವು ಇಲ್ಲಿ
@ಹನಿಬಿಂದು@
14.11.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ