ಭಾನುವಾರ, ನವೆಂಬರ್ 24, 2024

ನವಿಲುಗರಿ

ನೀನಿತ್ತ ನವಿಲುಗರಿ
ನಿನ್ನೊಳಿಹುದು ತಲೆಯ ಮೇಲೆ ಅಂದದ ನವಿಲುಗರಿ
ತನ್ನೊಳಗೆ ತಾನು ಕಲಿತು ಮೆರೆಯಬೇಕು ಸಿರಿ

ದೀಪ ಬೆಳಕು ಶಾಂತಿ ಮಂತ್ರ ಭಕ್ತಿ ಬೇಕು ಸದಾ
ಕೃಷ್ಣ ನಿನ್ನ ಕೊಳಲ ದನಿಯ ಕೇಳಿ ನಾನು ಫಿದಾ
ಗರಿಯ ಬಿಚ್ಚಿ ಕುಣಿವ ನವಿಲ ಖುಷಿಯ ಹಾಗೆ ಇಂದು
ನಿನ್ನ ನೆನೆದು ಬಾಳಿನಲ್ಲಿ ನಿತ್ಯ ಹಸಿರು ಮುಂದು

ಚುಕ್ಕೆ ತಾರೆ ಹೊಳೆಯುವಂತೆ ಮನದ ತುಂಬ ನಗು
ಪಕ್ಕದಲ್ಲಿ ರಾಧೆ ಇರಲು ಬಾಳ ಜೊತೆ ಹಿಗ್ಗು
ನಾನು ನೀನು ಎನಲು ಏನು ಬೇರೆ ಎಂಬ ಭಾವ
ಪ್ರೀತಿಯಲ್ಲಿ ಎಲ್ಲರೊಂದೆ ನೋವ ನೀಗಿ ಜೀವ

ತಾನು ತನ್ನದೆನುವ ತನ್ನತನದ ನೋವು ಸಾಕು
ನೀನೇ ಎನಲು ಬದುಕ ನಾವೆ ಮುಂದೆ ಸಾಗ ಬೇಕು
ಮುದದಿ ನಂಬಿ ದಿನವ ಕಳೆಯೆ ಹಿತವು ಇಹುದಿಲ್ಲಿ
ಸಂಗೀತದ ಅಲೆಯು ಹೊಮ್ಮಿ ನಿತ್ಯ ಗಾನ ಚೆಲ್ಲಿ
ಹನಿ ಬಿಂದು 
24.11.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ