ಸತ್ವಯುತ ಬದುಕು
ಸತ್ವವೇ ಇಲ್ಲದೆ ಹೋದರೆ ಏನಿದೆ
ಬದುಕಿನ ತುಂಬಾ ಸಪ್ಪೆ
ಮಿತೃತ್ವದಲ್ಲೂ ನಿತ್ಯ ನಿರಂತರ
ಕೆದಕದೆ ತೆಗೆಯದೆ ಸಿಪ್ಪೆ
ಭಾಷಾ ಪ್ರೌಢಿಮೆ ಬೇಕದು ಮನಕೆ
ಸಾಹಿತ್ಯ ಗುರಿಯ ಶಿಖರಕ್ಕೆ
ಕಾಸು ಕೊಟ್ಟರೂ ಜ್ಞಾನ ದೊರಕದು
ಓದಿನ ಅಂಶದ ಲಾಭಕ್ಕೆ
ನಾಟ್ಯ ನೃತ್ಯ ನಟನಾ ಕೌಶಲ
ಅಭ್ಯಾಸದಿಂದ ಹೆಚ್ಚುವುದು
ಪಠ್ಯ ವಸ್ತುವಿನ ನಿಜ ಮನನ
ನಿತ್ಯ ಕಲಿಕೆಯಿಂದ ಆಗುವುದು
ದೇಶದ ಸಂಸ್ಕೃತಿ ಸಂಪತ್ತು ಬೆಳೆಯಲು
ಕೋಶದ ಜ್ಞಾನವೂ ಬೇಕಲ್ಲ
ವೇಷ ಕಟ್ಟುತ ಸುಮ್ಮನೆ ತಿರುಗಲು
ಸತ್ವವು ಎಲ್ಲೂ ಸಾಲಲ್ಲ
ಓದು ,ಬರಹ , ಅಭ್ಯಾಸ, ನೆನಪು
ಎಲ್ಲವೂ ಬೇಕು ಜ್ಞಾನಕ್ಕೆ
ಸತ್ವವ ಉಳಿಸಿ ಬೆಳೆಸಲು ಹೋರಾಟ
ಭಾರತ ದೇಶದ ಉದ್ಧಾರಕ್ಕೆ..
@ಹನಿಬಿಂದು@
19.01.2024
ಪ್ರೇಮಾ ಆರ್ ಶೆಟ್ಟಿ
ಎಂ.ಎ. ಬಿ.ಎಡ್
ಸಹ ಶಿಕ್ಷಕರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ