ಬಯಲ ಮೆರವಣಿಗೆ
ಬಾನ ಬಯಲಲಿ ಸಾಗಿ ಹೊರಟಿದೆ
ಗ್ರಹಗಳ ಮೆರವಣಿಗೆ
ಕಾಣದೆ ಹೋದರೂ ಬರಿಯ ಕಣ್ಣಿಗೆ
ಭ್ರಾತೃತ್ವದ ಛಾಯೆ ಮಹಿಮೆಗೆ
ನೇರವಾದ ದಾರಿಯಲಿ ರವಿಯ
ಸುತ್ತ ಪಯಣ
ಸೇರಲಿರುವ ಜಾಗದಲಿ
ಸರ್ವರ ಸಮ್ಮಿಲನ
ಧರೆಯ ಆಚೆ ಈಚೆಯಲ್ಲಿ
ಸಾಲಿನ ರೋಮಾಂಚನ
ಜನರ ಮನಕೆ ನೋಟವಿದು
ಸಂತಸದಭ್ಯಂಜನ
ನಿಂತಲ್ಲಿ ನಿಲ್ಲಲಾರದೆ
ಹೊರಟಿವೆ ಗ್ರಹ ಭಂಟರು
ಬಯಸಿಹುದ ಸಾಧಿಸಲು
ಬೇಕಿದೆ ಕಾರ್ಯ ನಿರಂತರ
@ಹನಿಬಿಂದು@
20.01.2025
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ