ಸ್ವತ್ವದ ಬೇರು
ಸ್ವಂತಿಕೆ ಬೇಕು ಸಂಸ್ಕೃತಿಯಲ್ಲಿ
ಭಾರತೀಯತೆಯ ಅಭಿಮಾನವಿಲ್ಲಿ
ಸತ್ತರೂ ಸ್ವಂತದ ಅಧಿಕಾರವಿರಲಿ
ಸ್ವತ್ತಿಗೂ ನನ್ನದೆಂಬ ನಿತ್ಯತೆ ಬರಲಿ
ನಾಟ್ಯ ವಿದ್ಯೆ ನಟನಾ ಕೌಶಲ
ಸಾಹಿತ್ಯ ಶಿಖರದ ಭಾಷಾ ಸಮತಲ
ವಾಚ್ಯ ಓದು ಹಾಡಿಗೂ ಸೈ ಸೈ
ತನ್ನದೇ ವಿಶೇಷ ಇರಲದು ಸ್ವತ್ವವೈ
ಸಂಪತ್ತು ಸಂಯಮ ಸಹಕಾರ ನಿಯಮ
ಕಂಪಿನ ಇಂಪಿನ ಕೋಗಿಲೆ ಸರಿಗಮ
ಸೊಂಪಿನ ಭಾಷೆ ತಂಪಿನ ಊರು
ಎಲ್ಲಕ್ಕೂ ಬೇಕು ಸ್ವಂತದ ಸೂರು
ಸ್ವಂತದ ಬೇರು ಇರಲದು ಸ್ವರ್ಗ
ಕಂತಿನ ಹಣವಾದರೂ ಇದೆ ಮಾರ್ಗ
ಮಂಕು ರಸರಹಿತ ಭಾವಗಳ ಕಣಜ
ಸ್ವಂತಿಕೆ ಇಲ್ಲದ ಸಾಹಿತ್ಯ ಸಮಾಜ
ನಾನು ನನ್ನದು ತಾನು ತನ್ನದು
ಸ್ವಂತದ ಗುಡಿಸಲು ಸರಕು ಹಿರಿದು
ಬಾಡದೆ ಇರಲಿ ಹಿರಿಯರ ಪರಿಶ್ರಮ
ಕಾಡದೆ ಇರಲಿ ಹಿಂದಿನ ಉಪಕ್ರಮ
@ಹನಿಬಿಂದು@
20.01.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ