ಸೋಮವಾರ, ಜೂನ್ 8, 2026

ಆಸೆ

ಆಸೆ

ಅಳಿವಿನಂಚಿನಿಂದ ಉಳಿವಿನೆಡೆಗೆ ಮನ ಅರಳಲಿ
 ಗೆಲುವಿನಡೆಗೆ ಬದುಕ ರಥವು ಹಾದು ಹೋಗಲಿ
ಹಸಿ ಹಸಿರ ಸಾಲು ಇಕ್ಕೆಲಗಳಲ್ಲಿ ಅತ್ತಿತ್ತ ಬೆಳೆಯಲಿ 
ಮರಗಳಲಿ ಬಯಲು ಬೆಂಗಾಡು ತುಂಬಿ ತುಳುಕಲಿ 

ಸುಯ್ಯೆಂದು ಬೀಸುವ ತಳಿರ ತಂಗಾಳಿ ಬರಲಿ
ಸುರ್ರೆಂದು ಜಾರುವ  ಮಳೆ ಹನಿಯು ನಲಿದು ಬೀಳಲಿ
ಭೋರ್ಗರೆವ ಸಾಗರದಿ ಮಹಾ ಅಲೆ ಪುಟಿದು ಚಿಮ್ಮಲಿ
ಬದುಕ ನೌಕೆಯು ಅಂದದಿ ತೇಲಿ ದಡವ ಸೇರಲಿ

ಸಂತಸದ ಮೂಟೆ ಹೊತ್ತು ಜನ ತಿರುಗಿ ಅಂದದಿ ಬಾಳಲಿ
ಬೇಸರ ದುಃಖ ಕಷ್ಟಗಳ ಅಂದಕಾರದ ಛಾಯೆಯು ಓಡಿ ಹೋಗಲಿ
ಮನವೆಂಬುದು ಮಲ್ಲಿಗೆಯಂತೆ ಪರಿಮಳದ ಕಂಪು ಬೀರಲಿ
ನದಿ ಸಾಗರವ ಸೇರಿ ಪ್ರೇಮದಿ ಬೆಸೆದು ಒಂದಾಗಲಿ
@ಹನಿಬಿಂದು@
08.06.2026

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ