ಬುಧವಾರ, ಮೇ 23, 2018

316. ಕವನ-ಧರಣಿ

ಧರಣಿ ನಗುತಿಹಳು

ಹಸಿರ ಸೀರೆಯ ಉಟ್ಟು
ನೀಲಿ ಕೊಡೆಯನು ಹಿಡಿದು
ಮಳೆರಾಯನ ಬರವು ಕಾದು
ಧರಣಿ ಪಕಪಕನೆ ನಗುತಿಹಳು...

ಮೋಡದಾಟವ ನೋಡಿ ತಣಿದು
ಗಾಳಿ ಬೀಸುವ ದಿಕ್ಕ ನೆನೆದು
ಸೂರ್ಯ ಕಿರಣಕೆ ಬೀಗ ಜಡಿದು
ಧರಣಿ ಮಳೆಗಾಗಿ ಕಾದಿಹಳು...

ಮನಸ ತುಂಬಾ ಭಾನಿನ ಕಂಪು
ರಾತ್ರಿಯಾದೊಡೆ ಚಂದಿರನ ತಂಪು
ಪಶು ಪಕ್ಷಿಗಳ ರಾಗದ ಇಂಪು
ಧರಣಿ ವರುಣನಿಗಾಗಿ ಕಾಯುತಿಹಳು...

ಮನದೊಳಗೆಲ್ಲಾ ಜನರ ಹಿಡಿತ
ಹೃದಯದೊಳು ಜೀವಿಯ ಮಿಡಿತ
ಪಚ್ಚೆ ಹಸಿರ ಉಳಿಸೊ ತುಡಿತ
ಧರಣಿ ವರುಣನಿಗಾಗಿ ಕ್ಷಣಗಣನೆ ಮಾಡುತಿಹಳು...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ