ಭಾನುವಾರ, ಮೇ 6, 2018

290.ಕವನ-ಸಹೋದರನಿಗೆ

ಪ್ರೀತಿಯ ತಮ್ಮನಿಗೆ

ಸಮಾಜ ಸೇವೆಗೆ ಹೆಸರಾಗಿ
ಜನಮನದ ಮಲ್ಲಿಗೆಯಾಗಿ
ಬಡವ ಬಲ್ಲವಗೆ ನೆರಳಾಗಿ
ಬಾಳು ನೀ ನೂರಾರು ವರುಷ ಹಾಯಾಗಿ..

ಸರ್ವ ಜನಕೆ ಹಿತವನು ನೀ ಮಾಡಿ
ತಂಗಿಯರ ಗೆಳೆತನ,ಪ್ರೀತಿ ಕಾಪಾಡಿ
ಮನದ ಬಾಗಿಲ ಸಮಾಜಕೆ ದೂಡಿ
ಸಿಗಲಿ ನಿನಗೆ ಒಳ್ಳೆಯ ಜೋಡಿ...

ಮಕ್ಕಳ ಮುದ್ದಿನ ಮಾಮ ನೀ
ಅಕ್ಕಂದಿರ ಪ್ರೀತಿಯ ತಮ್ಮ ನೀ
ತಂಗಿಯರಿಗೆ ಬೇಕಾದ ಅಣ್ಣ ನೀ
ಸಂತಸದಿ ಎಂದೆಂದು ಬಾಳು ನೀ...

ಬಣ್ಣ ಬಣ್ಣದ ಕನಸಾಗಲಿ ನನಸು
ಸುಖ ದುಃಖಗಳ ಸಮನಾಗಿ ಎದುರಿಸು
ಒಂದೆ ಮನದಿ ಸರ್ವರ ಹರಸು
ಇಗೋ ಈ ಅಕ್ಕನ ಆಶೀರ್ವಾದ ಸ್ವೀಕರಿಸು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ