ಗಝಲ್
ನನ್ನ ಮನದ ಕದ ತಟ್ಟಿದ್ದು ಆ ನಿನ್ನ ನಗು
ನನ್ನ ಕಣ್ಣನು ಅರಳಿಸಿದ್ದು ಆ ನಿನ್ನ ನಗು..
ನನ್ನ ಮೌನದ ಕಟ್ಟೆಯೊಡೆದು ಹೊರಬಂದೆ ನಾನು
ನನ್ನ ಭಾವಕ್ಕೆ ಪದವಾದದ್ದು ಆ ನಿನ್ನ ನಗು..
ಮನದ ಮಾತನು ಆಲಿಸುತ ಪದಕಟ್ಟಿ ಹಾಡಿದೆ
ತನ್ನಳಲನು ತೋಡಿಕೊಳಲು ಕಲಿಸಿದ್ದು ಆ ನಿನ್ನ ನಗು!
ವಿಜಯದ ಸಂಕೇತದಂತೆ ಅಡಿಗಡಿಗೆ ಬದುಕಿದೆ
ನನ್ನ ಬದುಕಿಗೆ ಆಧಾರವಾಗಿ ನಿಂತದ್ದು ಆ ನಿನ್ನ ನಗು!
ನನ್ನಂತರಂಗದಲಿ ಬಾಳ ಅರಿವ ಮೂಡಿಸಿದೆ
ಅಂತರಾಳದ ಕದ ತಟ್ಟಿ ಎಬ್ಬಿಸಿದ್ದು ಆ ನಿನ್ನ ನಗು..
ಜೀವನವ ಪ್ರೇಮದ ಕಡಲಲ್ಲಿ ಮುಳುಗಿಸಿದೆ
ಬಾಳ ಬಂಡಿಯ ಬೆಳಗಿಸಿದ್ದು ಆ ನಿನ್ನ ನಗು!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ