ನಿನ್ನ ನೆನಪಲಿ
ಮನದಿ ಸಿಹಿಸಿಹಿ
ಭಾವ ತುಂಬಿದೆ
ದಿನದಿ ನಿಶೆಯಲಿ
ಸ್ನೇಹ ಸವಿದಿದೆ..
ಕನವರಿಕೆಯಲಿ
ಮನವು ಮಿಡಿದಿದೆ
ನೀನೆ ನನ್ನವನೆಂದು
ಹೃದಯ ಹಾಡಿದೆ..
ಬೇಸರದ ಕಳೆ
ದೂರವಾಗಿದೆ
ನೀನೆ ನನ್ನವ
ಎಂದು ಸಾರಿದೆ...
ನಾಡಿ ಮಿಡಿತವು
ನಿನ್ನೆ ಕರೆದಿದೆ
ತನುವು ಬಹಳವೆ
ಹಗುರವಾಗಿದೆ..
ನಿನ್ನ ಬಿಂಬವೆ
ನಯನ ಕಂಡಿದೆ
ಕನಸು ನನಸಾಗುವ
ಕಾಲ ಬಂದಿದೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ