ಬುಧವಾರ, ಜುಲೈ 11, 2018

362. 3 ಹನಿಗಳು

1. ಪೆನ್ನು
ನಿನ್ನಯ ಮನದ
ವಿಷಯವ ಬರೆವೆ
ನಿನ್ನೊಲವಿಗೆ ನಾನೇ
ಪತ್ರವ ಬರೆವೆ
ಖಡ್ಗಕ್ಕಿಂತಲೂ ಹರಿತವು ನಾ..
ಆದರೇನು?
ಕಂಪ್ಯೂಟರ್ ಕೊಲ್ಲುತ್ತಲಿದೆಯೆನ್ನ..

2. ಅಡಿಗೆ

ಬಲ್ಲವನೆ ಬಲ್ಲ
ಅಡಿಗೆಯ ರುಚಿಯ..
ಒಳ್ಳೆಯ ಬಾಣಸಿಗನಿರೆ
ಸವಿಯುವಿರಿ ಸವಿರುಚಿಯಾಸರೆ
ಅಡಿಗೆಯಿಂದಲೆ ಆರೋಗ್ಯವೆಲ್ಲ
ಊಟ ಬಲ್ಲವಗೆ ರೋಗವೆ ಇಲ್ಲ!!

3. ಪುಸ್ತಕ

ತಲೆಯಲಿ ತುಂಬಿಹ
ಕಲೆಯಲಿ ಅರಳಿಸಿಹ
ನನ್ನಲಿ ತಣಿವುದು
ಜ್ಞಾನದ ದಾಹ
ನೀನೇ ನನ್ನಯ
ಜನುಮದಾತ,ಓದುವಾತ!!

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ