ಸೋಮವಾರ, ಜುಲೈ 30, 2018

397. ಗಝಲ್-29

ಗಝಲ್

ನೋವಿನ ಬಾಳಿಗೆ ಮುಲಾಮಿನಂತೆ ನಿನ್ನ ಪ್ರೀತಿ
ನಾಳಿನ ಬಾಳಿಗೆ ಬೆಳಕಿನಂತೆ ನಿನ್ನ ಪ್ರೀತಿ..

ಅರಳುವ ಮೊಗ್ಗಿನ ಮೇಲೆ ಬಿದ್ದ ಹನಿಯಂತೆ,
ಇರುಳು ಕತ್ತಲಾದ ಇಳೆಗೆ ಬಿದ್ದ ಬೆಳದಿಂಗಳಂತೆ ನಿನ್ನ ಪ್ರೀತಿ.

ಹಣೆ ಮಧ್ಯ ಚಂದಿರನಂತಿರುವ ತಿಲಕದಂತೆ
ಕಗ್ಗತ್ತಲೆಯ ನಾಡಿಗೆ ರವಿ ಕಿರಣವು ಬಿದ್ದು ಹೊಳೆವಂತೆ ನಿನ್ನ ಪ್ರೀತಿ.

ಮದನನ  ಬಾಣವು ತಾಗಿ ತನ್ನ ಮರೆತವರಂತೆ,
ಮನದೆಳು ನೋವಿದ್ದರೂ ಮರೆಸುವ ತುಟಿಯ ಕಿರುನಗೆಯಂತೆ ನಿನ್ನ ಪ್ರೀತಿ..

ಜಡೆಯ ಬುಡಕೆ ಇಷ್ಟಪಟ್ಟು ಮುಡಿದ ಮಲ್ಲಿಗೆಯಂತೆ,
ಕಡೆಯ ಸಾಲಲಿ ಇಷ್ಟ ಪಟ್ಟು ಉಣ್ಣುವ ವ್ಯಕ್ತಿಯಂತೆ ನಿನ್ನ ಪ್ರೀತಿ..

ಪ್ರೇಮನ ಪ್ರೇಮಭರಿತ ನಿಶ್ಕಲ್ಮಶ ಹೃದಯದಂತೆ
ಮಣ್ಣೊಳಗೆ ಇಳಿದ ಮೊದಲ ಮಳೆ ನೀರಿನಂತೆ ನಿನ್ನ ಪ್ರೀತಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ