ಕುದುರೆಮುಖ
ಚಳಿಯೋ ಚಳಿಯು ಮಲೆನಾಡಿನ ಬಾಗಿಲು
ಗಡಗಡ ನಡುಕ ಕುದುರೆಮುಖದ ತಪ್ಪಲು...
ಮಲಗಲು ದಪ್ಪದ ಕೌದಿಯೇ ಬೇಕು
ಉಣ್ಣೆಯ ಬಟ್ಟೆಯು ಇದ್ದರೆ ಸಾಕು..
ನಡುಕದ ನಡುವೆ ಇರಬೇಕು ಬೆಂಕಿ
ಇಲ್ಲದೆ ಹೋದರೆ ಮರಗಟ್ಟುವೆ ಚಳಿ ಸೋಕಿ...
ಮೆತ್ತನೆ ಹೊದಿಕೆಯು ಇದ್ದರೆ ಸಾಲದು
ಅಜ್ಜಿಯು ಹೊಲಿದ ಕೌದಿಯೆ ಬೇಕೆನಿಸುವುದು..
ತುಂಗಾ ನೀರದು ಗಂಗಾ ನದಿ ನೀರಂತೆ
ಮಂಜೇ ಕರಗಿ ಹರಿದು ಬಂದಂತೆ...
ಈಗಿನ ದಿನದಲಿ ಗುಡ್ಡದ ಸಾಲು ಆಗಿದೆ ಬೋಳು
ಮನುಜನ ಕರಾಳ ಹಸ್ತ ತಂದಿದೆ ಗೋಳು..
ಜಲವೂ ನೆಲವೂ ಎಲ್ಲವೂ ಹಾಳು
ಕಾಡಲಿ ಉರಿದಿದೆ ಬೆಂಕಿಯ ಸಾಲು...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ