ಜನಗಳ ಜನಮನ ನಾಯಕರಿಗೆ
ಜಗತ್ತಿನ ಜನರಿಂದ ಜನುಮದಿನದ ಶುಭಾಶಯಗಳು...
ಜಗದಲಿ ಜಯಗಳಿಸುವವರಾಗಿ
ವಿದ್ಯಾರ್ಥಿಗಳಿಗೆ ವಿದ್ಯೆ ಹಂಚುವವರಾಗಿ
ಜಗದಗಲ ಯಜಮಾನರಾಗಿ
ಜೀವನದಿ ಜಯದ ಜೋಕಾಲಿಯಲಿ ಜೀಕಿ...
ಜೈಕಾರ ಎಲ್ಲಾ ಜಾಗದಲಿ ಮೊಳಗಲಿ
ಜೀವಜಲ ಬರಿದಾಗದಿರಲಿ
ಜಿಹ್ವೆಯು ಸುಳ್ಳಾಡದಿರಲಿ
ಜಂಗಾಬಲ ಉಡುಗದಿರಲಿ...
ಜಾತಿಬೇಧ ಸುಳಿಯದಿರಲಿ
ಜಗದಿ ಜನಜನಿತರಾಗಿರಲಿ
ಜಾಗಟೆ ಶಬ್ದದಂತೆ ಹೆಸರು ಹರಡಿ
ಜಾಗ್ರತೆಯ ಜೀವನ ಸಾಗಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ