ಗಝಲ್
ಇಣುಕಿಣುಕಿ ನೋಡಿ ಉತ್ತಮ ಜಾಗವೆಂದರಿಯಿತಾ ಪಾರಿವಾಳ
ಕಷ್ಟದಲಿ ಕಡ್ಡಿಗಳ ತಂದು ಗೂಡು ಕಟ್ಟಿತಾ ಪಾರಿವಾಳ...
ಖುಷಿಯಲಿ ತನ್ನ ನೋವ ಮರೆತು
ಗೂಡಿನಲಿ ಮೊಟ್ಟೆಯಿಟ್ಟಿತಾ ಪಾರಿವಾಳ..
ಮೊಟ್ಟೆಯ ಮೇಲೆ ಕುಳಿತು ಕಾವುಕೊಡುವ
ತನ್ನ ಜವಾಬ್ದಾರಿಯ ಶ್ರದ್ಧೆಯಿಂದ ಮಾಡಿತಾ ಪಾರಿವಾಳ..
ಮೊಟ್ಟೆಯೊಡೆಯಿತು, ಮರಿಗಳ ನೋಡಿತು
ಸಂತಸದಿ ನಕ್ಕು ನಲಿಯಿತಾ ಪಾರಿವಾಳ...
ಬಾಯಿ ತೆರೆದು ಕುಳಿತು 'ಅಮ್ಮಾ'ಎಂದು ಕರೆವ
ಮಕ್ಕಳಿಗೆ ಕಾಳ ತರಲು ಹಾರಿತಾ ಪಾರಿವಾಳ..
ಬೀಸಿದನು ಬಲೆಯ ಮಾನವ ಕಾಳ ಹಾಕಿ
ಬಲೆಯಲಿ ಸಿಕ್ಕಿ ಒದ್ದಾಡಿತಾ ಪಾರಿವಾಳ
ಪಂಜರದಿ ಹಾಕಿ ಖುಷಿಪಟ್ಟ ಮನುಜ
ಪುಟ್ಟ ಕಂದಮ್ಮಗಳ ಹಸಿವ ಬೇಗೆಗೆ ಮರುಗಿತಾ ಪಾರಿವಾಳ
ಪ್ರೇಮದಿ ಬೆಳೆಸಬೇಕಾದ ಕಂದಮ್ಮಗಳ ನೆನೆದು
ಏನೂ ತಿನ್ನದೆ ತನ್ನ ಜೀವ ಕಳೆದುಕೊಂಡಿತಾ ಪಾರಿವಾಳ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ