ಅವಳು
ಹಾಲುಹಲ್ಲ ಹಸುಳೆಯನ್ನು
ಎತ್ತಿಕೊಂಡು ಹಾಡುತ
ಏನು ಎತ್ತ ತಿಳಿಯದಿರವುವ
ಮಗುವ ಬೆಳೆಸಿ ಕಲಿಸುತ...
ತನ್ನ ಬದುಕು ತನ್ನ ಆಸೆ
ಎಲ್ಲವನ್ನು ಮರೆಯುತ
ತನ್ನ ಮಗುವೆ ಎಲ್ಲ ಎನುತ
ಬಾಳ ಹಾದಿ ಸವೆಸುತ..
ಹಸಿದ ಹೊಟ್ಟೆಗನ್ನ ನೀಡಿ
ಎಲ್ಲವನ್ನು ಸಹಿಸುತ
ನೀನೆ ಕಂದ ನನಗೆ ಎಲ್ಲ
ಎಂದು ಮನದಿ ಬೀಗುತ..
ತನ್ನ ಮಗುವೆ ತನ್ನ ಆಸ್ತಿ
ಎಂದು ಮನದಿ ನಲಿಯುತ
ತಾನೇ ಬೇಕು ಬೇಡವೆಲ್ಲ
ಅರಿತು ಅದಕೆ ನೀಡುತ..
ಗುಮ್ಮ ಬಂದನೆನುತ ನಮ್ಮ
ಕಾಳಜಿಯ ವಹಿಸುತ..
ಅಮ್ಮನೆಂಬ ದೇವತೆಗೆ
ಸರಿಸಾಟಿ ಇಹುದೇ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ