ಮಂಗಳವಾರ, ಜುಲೈ 24, 2018

387.ಶಿಶುಗೀತೆ

ಶಿಶುಗೀತೆ-1

ಬಾರೋ ಗೆಳೆಯ

ಬಾರೋ ಗೆಳೆಯ ನನ್ನ ಸನಿಹ
ಸೂರ್ಯ-ಚಂದ್ರರ ನೋಡೋಣ..
ಗಿಡ-ಮರ-ಲತೆಗಳ ಸುತ್ತಮುತ್ತ
ಹಕ್ಕಿಗಳಂತೆ ಹಾರೋಣ...

ಚಿಲಿಪಿಲಿಯ ರಾಗದೊಡನೆ
ಪರಿಸರವ ಸುತ್ತೋಣ..
ನೀನು-ನಾನು ಒಟ್ಟು ಸೇರಿ
ನದಿಯಲಿಂದು ಈಜೋಣ...

ಪಾಟಿ ಚೀಲ ಸ್ಲೇಟು ಬಳಪ
ಮರೆತು ಆಟವನಾಡೋಣ..
ವಿಮಾನದಾಟ ಆಡಲು ನಾವು
ಚಿಟ್ಟೆಗಳನ್ನು ಹಿಡಿಯೋಣ...

ಮನದ ದುಗುಡ ಕಳೆದುಕೊಂಡು
ಹಾಡಿ ಕುಣಿದು ನಲಿಯೋಣ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ