ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-3
ಬದುಕೆಂಬುದು ಸೈಕಲ್. ತನ್ನಷ್ಟಕ್ಕೆ ತಾನೇ ಮುಂದೆ ಹೋಗಲಾರದು. ತಳ್ಳ ಬೇಕು, ಎಳೆಯ ಬೇಕು, ಒತ್ತಿ ಮುಂದೆ ಹೋಗಬೇಕಾದರೆ ಪೆಡಲ್ ಮೆಟ್ಟಿ ಹರಸಾಹಸ ಮಾಡಬೇಕು.
ಅಷ್ಟೇ ಅಲ್ಲ, ಪ್ರತಿಯೊಂದು ಬಿಡಿ ಭಾಗಗಳೂ ಒಂದಕ್ಕೊಂದು ಸಹಕರಿಸಬೇಕು. ಚೈನ್ ತುಂಡಾದರೂ ಚಕ್ರ ಮುಂದೆ ಹೋಗದು. ಬೆಲ್ ಕೆಲಸ ಮಾಡದಿದ್ದರೂ ಅಪಾಯಕಾರಿ. ಇದೆಲ್ಲ ಬದುಕಿನ ನೆಂಟರು, ಬಂಧುಗಳು, ಮಿತ್ರರನ್ನು ಪ್ರತಿನಿಧಿಸುತ್ತವೆ.
ಹಣದ ಅಹಂಕಾರ,ಮದದಿಂದ ಸೈಕಲನ್ನು ಎಷ್ಟೋ ಅಂದಗೊಳಿಸಿ ಅಲಂಕರಿಸಬಹುದು. ಎಲ್ಲಕ್ಕಿಂತ ಎದ್ದು ಕಾಣುವಂತೆ ಮಾಡಬಹುದು. ಆದರೂ ಅದನ್ನು ಬಳಸುವುದು ಮುಂದೆ ಸಾಗಲಿಕ್ಕೆ ಮಾತ್ರ!
ಸೈಕಲ್ ನ ಎರಡು ಗಾಲಿಗಳು ಅಥವಾ ಚಕ್ರಗಳು ಜೀವನ ಸಂಗಾತಿಯನ್ನು ಪ್ರತಿಬಿಂಬಿಸುತ್ತವೆ. ಅವೆರಡು ಜೊತೆಯಾಗಿ ಸಾಗಿದಾಗ ಮಾತ್ರ ಸಂಸಾರದ ಬೈಸಿಕಲ್ ಮುಂದೆ ಹೋಗಲು ಸಾಧ್ಯ. ಒಂದಕ್ಕೊಂದು ಸಮನಾಗಿ, ಸಮಭಾವದಿಂದ ಮುಂದುವರಿಯಬೇಕು! ಸಂಸಾರ ಸಾಗರ ದಡ ಸೇರಲು ಹಗಲು ರಾತ್ರಿ ಪೆಡಲ್ ಮೆಟ್ಟಲೇ ಬೇಕು. ತನ್ನ ಕೆಲಸ ತಾನು ಮಾಡಿಕೊಂಡು, ತನ್ನವರಿಗೂ ಸಹಾಯ ಮಾಡಿಕೊಂಡು ಮುಂದುವರೆದರೆ ಮಾತ್ರ ಬದುಕಿನ ಸೈಕಲ್ ಸರಾಗವಾಗಿ ಮುಂದೆ ಸಾಗೀತು. ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ