1. ಮನ
ಮರ್ಕಟನಂತಿರುವ ಮನ
ಸುತ್ತಾಡುತ್ತೆ ಪೂರ್ತಿ ವನ
ಹೊರಕಾಕುತ್ತೆ ವಿವಿಧ ಭಾವಾನ
ಬಿಡದು ಎಂದೂ ತನ್ನತನ
ಅದರ ಮೇಲೇನೇ ಈ ಹನಿಗವನ...
2. ಹೆಣ್ಣು
ಕೂಸಾಗಿ ಮನೆಯಲೆಲ್ಲ ಓಡಾಡಿ
ಮನವರಿತು ಮನದಲಿ ನಲಿದಾಡಿ
ಸೇರಿದ ಮನೆಯನೂ ನೋಡಿ
ತನ್ನದೇನಿಲ್ಲದ ಜೀವನದ ಜೋಡಿ!
3. ಟಿವಿ
ಜನರನೆಲ್ಲ ತನ್ನತ್ತ ಸೆಳೆವೆ
ಸಮಯವೆಲ್ಲ ಹಾಳು ಮಾಡುವೆ
ಪ್ರಾರಂಭಿಸಿದವಗೆ ಗಳಿಸಿ ಕೊಡುವೆ
ನೀ ವಿಸ್ಮಯ ಪೆಟ್ಟಿಗೆ ಎನುವೆ..
@ಪ್ರೇಮ್@
ವಿಮರ್ಶೆ
ಟಿವಿ
ಇಂದಿನ ಕಾಲದ ಅತ್ಯದ್ಭುತ ಸಾಧನಗಳಲ್ಲಿ ಒಂದಾದ ಟಿವಿಯ ಮೇಲೊಂದು ಸರಳ ಹನಿ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಟಿವಿಯತ್ತ ಸುಳಿಯದವರಾರೂ ಇಲ್ಲ. ಆಟೋಟ, ಧಾರಾವಾಹಿ, ಚಲನಚಿತ್ರ, ಮನರಂಜನೆ, ಮಕ್ಕಳ ಕಾರ್ಯಕ್ರಮ,ರಿಯಾಲಿಟಿ ಶೋ, ವರದಿ, ವಾರ್ತೆ,ಹಾಡು,ನೃತ್ಯ ಹೀಗೆ ತರತರ ಅಭಿರುಚಿಯ ಜನರಿಗೆ ವಿಧವಿಧ ಕಾರ್ಯಕ್ರಮಗಳು. ಮನೆಯಲ್ಲಿ ಅದಕ್ಕಾಗಿ ಜಗಳ. ಗಂಟೆಗಟ್ಟಲೆ ನೋಡುವುದರಿಂದ ಎಲ್ಲರ ಕಾಲಹರಣ.
ಚಾನೆಲ್ ಓನರ್ಗಳಿಗೆ ಉತ್ತಮ ಗಳಿಕೆ. ಜನರೆಲ್ಲ ಲೈವ್ ಕೂಡಾ ನೋಡುವ ಕಾರಣ ಅದು ವಿಸ್ಮಯಕರ ಮಾಯಾ ಪೆಟ್ಟಿಗೆ ಎನ್ನುವರಲ್ಲವೇ.. ಈಗ ಈ ಸ್ಥಾನವನ್ನು ಕಂಪ್ಯೂಟರ್ ತುಂಬಿದೆಯಾದರೂ ಟಿವಿಯಿಲ್ಲದ ಮನೆಯುಂಟೇ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ