ಗುರುವಾರ, ಜುಲೈ 19, 2018

377. ಗಝಲ್-6

ಗಝಲ್,

ಮಾನವತೆಯ ನಡುವೆ ದ್ವೇಷದ ಕಹಳೆಯು ಏಕೆ?
ಪ್ರೀತಿಯ ನಡುವೆ ಮೋಸದ ಸುರಿಮಳೆಯು ಏಕೆ?

ಪ್ರೀತಿ-ಸ್ನೇಹಗಳ ನಡುವೆ ಸಂತಸದ ಸವಿ
ನಡುನಡುವೆ ವೈರ ಕದನಗಳ ಮಾಲೆಯು ಏಕೆ?

ನಂಬಿಕೆಯು ಬದುಕಿನ ಮೂಲ ಗುರಿ
ಅದರೆಡೆಯಲಿ ಕಪಟತನದ ಸುಳಿಯು ಏಕೆ?

ಗೆಳೆತನದ ಮಾಯೆಯದು ಮರೆಯಲಸಾಧ್ಯ
ಮರೆಯಲಿ ನೋಡಿಯೂ ಗುರುತಿಸದಿರುವ ಎದೆಯು ಏಕೆ?

ಪ್ರೇಮದ ಮನದಿ ಬದುಕಲು ಬೇಕು
ಸೇಡಿನ ಕಿಡಿಯ ಕೆಂಡದ ಉರಿಯು ಏಕೆ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ