ಶುಭ ಹಾರೈಕೆ
ನವೀನ ನವ್ಯ ನವದಿನವು
ನಗು ಮೊಗವ ಬೆಳೆಸಲಿ
ನವಭಾವ ನವಚೇತನ
ನಿತ್ಯ ಪುಟಿದು ಚಿಮ್ಮಲಿ..
ನಾ ನಿನಗೆ ನೀ ನನಗೆ
ಸಹಾಯ ಮನವು ಬರಲಿ
ನಮ್ಮೆಲ್ಲರ ಒಗ್ಗೂಡಿಸೊ
ದೈತ್ಯ ಶಕ್ತಿ ನಡೆದು ಬರಲಿ...
ನಾದದ ನಗು ನಮ್ಮೆದೆಯಲಿ
ನಿನಾದದ ರಂಗೇರಲಿ
ಉದಯ ರವಿಯ ನಿತ್ಯ ಕಿರಣ
ನವೀನ ರಂಗು ಸ್ಫುರಿಸಲಿ..
ನಮ್ಮ ಮನವು ನೃತ್ಯವಾಡಿ
ನವವಸಂತ ಹೊಮ್ಮಲಿ
ನಾದ ನಾಟ್ಯ ಜೊತೆಗೆ ಸೇರಿ
ಜೀವನಾದ ನಲಿಯಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ