ಬುಧವಾರ, ಜುಲೈ 18, 2018

371.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-4

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-4

ನಮ್ಮ ಕಾಲ ಟೆಕ್ನಿಕಲ್ ಯುಗ, ವೈಜ್ಞಾನಿಕ ಯುಗ ಎಲ್ಲ ಫಾರ್ವರ್ಡ್ ಅಂತೆಲ್ಲ ಕೊಚ್ಚಿಕೊಂಡು ಬದುಕುವ ನಮಗೆ ಪಕ್ಕದ ಮನೆಯವರು ಯಾರೆಂದೇ ಸರಿಯಾಗಿ ಗೊತ್ತಿಲ್ಲ! ನಮ್ಮ ಮಾತೃಭಾಷೆಯೂ ಸರಿಯಾಗಿ ಬರಲ್ಲ! ಓದಿ ಬರೆಯಲು ಕಲಿಯುವುದು ಅದು ಯಾವುದೋ ಫಾರಿನ್ ಭಾಷೆ ಬಿಡಿ, ಮನೆಯಲ್ಲೂ ಇಂಗ್ಲಿಷ್ ಮಾತನಾಡಿದರೆ ನಾವು ಡಿಗ್ನಿಫೈಡ್ ಎಂದು ತಿಳಿದುಕೊಂಡ ಹಲವಾರು ಜನರ ಮಕ್ಕಳಿಗೆ ಇಂದಿಗೂ ಕನ್ನಡ ಬರುವುದಿಲ್ಲ!
   ಟಿ.ವಿ, ಕಂಪ್ಯೂಟರ್ ಬಂದ ಮೇಲೆ ಫೋಟೋ, ಹಾಡು,ಡ್ಯಾನ್ಸ್ , ಆ್ಯಕ್ಟಿಂಗ್ ಗಳ ಗೀಳು ಹೆಚ್ಚಿದೆ. ಅದ್ಯಾವುದೂ ಇಲ್ಲದ ಹಿಂದಿನ ದಿನಗಳಲ್ಲಿ ಜನ ಸಮಯದ ಹೊಂದಾಣಿಕೆಗಾಗಿ ಕಟ್ಟುತ್ತಿದ್ದ ಕತೆ, ಅಜ್ಜಿಕತೆ, ಪಾಡ್ದನ, ಕೀರ್ತನೆ,ಭಜನೆ ಗಾದೆ, ಒಗಟುಗಳು ಅದೆಷ್ಟು ಸುಂದರ!
  ಹಿರಿಯರ ಬುದ್ಧಿವಂತಿಕೆಯನ್ನು ಮೆಚ್ಚಬೇಕಾದದ್ದೆ. ಮೊಬೈಲ್ ಒತ್ತುತ್ತಾ ಗಂಟೆಗಟ್ಟಲೆ ಟೆಂಪಲ್ ರನ್ ಆಟವಾಡುತ್ತಾ ದಿನದಿಂದ ದಿನಕ್ಕೆ ಸ್ಕೋರ್ ಹೆಚ್ಚಿಸಿಕೊಳ್ಳುವ ಮಗುವಿನ ಮೆದುಳಿನಲ್ಲಿ ಹೊಸಹೊಸ ಐಡಿಯಾಗಳು ಹೇಗೆ ತಾನೆ ಹೊಳೆದಾವು?
ಏನೇ ಕೇಳಲಿ, ಯೂ ಟ್ಯೂಬ್ ನಲ್ಲಿ ಇದೆ,ಗೂಗಲ್ ನೋಡಿ ಹೇಳುತ್ತೇನೆ ಎನ್ನುವ ಕಾಲವಾದ ಇಂದು ನಮ್ಮ ಮಕ್ಕಳು ಗೂಗಲ್ ಗೆ ಮಾಹಿತಿ ತುಂಬುವ ಕಣಜಗಳಾಗಬೇಕೇ ಹೊರತು ಮಾಹಿತಿ ಹುಡುಕುತ್ತಾ ಸಮಯ ಕಳೆವ ಹುಳಗಳಾಗ ಬಾರದು ಎಂದಾದರೆ ಮಕ್ಕಳಿಗೆ ತರಹೇವಾರಿ ಪುಸ್ತಕಗಳ ಓದುವ ಅಭ್ಯಾಸ ಬೆಳೆಸಬೇಕು.
ನಮ್ಮ ಮಕ್ಕಳೂ ಸಂಶೋಧಕರ ಪಟ್ಟಿಯಲ್ಲಿ ಬರುವಂಥವರಾಗಬೇಕಾದರೆ ಅವರ ಮೆದುಳಿನಲ್ಲಿ ಕುತೂಹಲ ತುಂಬುವವರು ನಾವಾಗಬೇಕು. ಅಂಥ ಹಿರಿಯರ ಬುದ್ಧಿ ಸಂಪತ್ತು ಮಕ್ಕಳಿಗೂ ದಯಪಾಲಿಸಲ್ಪಟ್ಟಿದೆ. ಅದು ಮೊಬೈಲ್ ಗೇಮ್ ನಲ್ಲಿ ಬೆರೆತು, ಕೊಳೆತು ಹೋಗದೆ ಮಕ್ಕಳಿಗೆ ಹೊಸದನ್ನು ಕಲಿಯುವ ಕಲಿಸುವ ಗುಣ ನಮ್ಮದಾಗಲಿ.

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ