ಅಂತರಂಗದ ಅಳಲು
ಅಂತರಂಗದಿ ಅರಗದ ಆಯೋಮಯ ಅನುರಣನ
ಅರಿತು ಅರಿಯದ ಆಯುಧಗಳ ತೆರದ ತಲ್ಲಣ
ಅರೆವಳಿಕೆ ತರಹ ಅನವರತ ಆತುರತೆ
ಅವಿನಾಭಾವ ನಂಟಿನ ಜತೆ ಸೇರೋ ಕಾತುರತೆ..
ಅಗಲಿಕೆಯ ಅರಮನೆಯ ತೊರೆವಂಥ ಅವಕಾಶ
ಅನುಭವದ ಗೂಡಲ್ಲಿ ಬೆರೆವಂಥ ವಿಶ್ವಾಸ.
ಅವನೆನಗೆ ಅವಳೆನಗೆ ನವಭಾವ ನವೋಲ್ಲಾಸ
ಅನವರತ ಅವಿನಾಭಾವ ಮನಸಿನ ಉಲ್ಲಾಸ..
ಅವಕಾಶದ ಆಗರ ಅರವತ್ತರ ಅನುಭವ
ಅರಳುವಿಕೆಯ ಮನದ ಆಳೆತ್ತರ ಭಾವ!
ಅಂಜುವಿಕೆಯಿಲ್ಲ , ಅವಕಾಶ ಬೇಕಲ್ಲ
ಅನವರತ ಅನುಭಾವ ಆತಂಕ ಇಲ್ಲಿಲ್ಲ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ