ನೇಸರ
ನನ್ನ ಕಣ್ಣ ಕ್ಯಾಮರಾದಲ್ಲಿ
ನಿನ್ನ ಕಿರಣ ಮೂಡಿತಿಲ್ಲಿ
ನೀ ಬರಲು ದಿನ ಬೆಳಗು
ಹೆಚ್ಚುವುದು ಪ್ರಕೃತಿಯ ಸೊಬಗು...
ಮನದ ಮದ ಸರಿಯುವುದು
ಮೈಮನ ನವಿರೇಳುವುದು
ನೀ ಬರಲು ಬೆಳಕಾಗುವುದು
ನನ್ನ ನಿದ್ರೆ ಕಾಲಿಗೆ ಬುದ್ಧಿ ಹೇಳುವುದು.
ಭಾನು, ರವಿ, ಸೂರ್ಯ,ಆದಿತ್ಯ
ಮಿತ್ರ, ರಬ ಹೆಸರಿನ ನೀ ಬರುವೆ ನಿತ್ಯ
ನಿನಗಿಲ್ಲ ರಜೆಯ ಮಜಾ, ಇದು ಸತ್ಯ
ನೀ ಬರದಿರೆ ನಮ್ಮ ಬಾಳು ಅಂತ್ಯ
ನಿನ್ನಂದ ಜಗಕೆಲ್ಲ ಬೆಳಕು
ನೀ ಬರಲು ಭೂಮಿಗೆ ತಳುಕು
ನಿನ್ನುಸಿರು ಇಷ್ಟ ಗಿಡ-ಮರಕು
ನಿನ್ನಿಂದಲೆ ನಮ್ಮ ಈ ಬದುಕು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ