ಮಂಗಳವಾರ, ಜುಲೈ 3, 2018

346.ಪರಿಸರ ಗೀತೆ

ರಾಗ-ಬೊಂಬೆ ಹೇಳುತೈತೆ
ಪರಿಸರ ಗೀತೆ

ಕಡಿಯದಿರೆಂದೂ

ರಚನೆ-ಪ್ರೇಮ್

ಮರವು ಹೇಳುತೈತೆ.. ಗಿಡವೂ ಕೇಳುತೈತೆ
ಕಡಿಬೇಡೀ ನಮ್ಮಾ...
ಗಾಳಿಯ ಕೊಡುವೆ...
ನೆರಳನು ಕೊಡುವೆ..
ಆಸರೆ ಕೊಡುವೆ...
ಮಳೆಯನು ತರುವೆ..
ಗಿಡಮರ ಬೆಳೆಸಿರಿ ನಮ್ಮನು ಉಳಿಸಿರಿ
ನಿಮಗೇ ಒಳಿತೆಂದೂ...

ಕಡಿಯದೆ ನೋಡೂ ಮರವ ಬೆಳೆಸುತ ನೀ ನೋಡು...
ಚಂದ ಬದುಕುವೆ, ಶುದ್ಧ ನೀರು ಕುಡಿಯುವೆ...
ಮರವು....

ಕಾಡಿನ ನಡುವಲು ರಸ್ತೆಯ ಬದಿಯಲು
ನಾನು ಬೆಳೆಯುವೆ....
ಬೆಳೆದು ನೆರಳನು ನಾ ಕೊಡುವೆ...
ಕಿರಿಯರೆ ನೆಡಲಿ, ನೀರನು ಹಾಕಲಿ
ಬೆಳೆವೆನು ನಾನೆಂದೂ
ಭಾಗ್ಯವ ತರುವೆನು ನಿಮಗೆಂದು...
ಮರವೂ....

ಸಾಲು ಮರದ ತಿಮ್ಮಕ್ಕನ ನೋಡಿ
ಸಾಲು ಸಾಲು ಪ್ರಶಸ್ತಿ ಬಂತು
ಜತೆಗಿರಿ ನೀವೂ..
ನೆಡಿಸಿದ ಮೇಲೆ...
ನೀರನು ಹಾಕಿ..
ರಕ್ಷಿಸಿ ಬೆಳೆಸಿ...
ಹೂಹಣ್ಣ ಕೊಡುವೆ ..
ಕಾಯಿಯ ಕೊಡುವೆ..
ನನ್ನನು ಬೆಳೆಸಿದ ನಿಮ್ಮಾರೋಗ್ಯ ಕೆಡದು ಎಂದಿಗೂ..
ನೀವು ಬದುಕುವಿರೆಂದಿಗೂ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ