ಶನಿವಾರ, ಜುಲೈ 7, 2018

353. ವರುಣನ ವರಾತ

ಕಾವ್ಯದ ಕಡಲು-00೨

ವರುಣನ ವರಾತ

ವರುಣನ ವರಾತ
ವಯಸಿಗೆ ಮೀರಿ
ವಸತಿಯು ಮಾಯ
ವಾಸವು ಆಯೋಮಯ..

ವರ್ಷದ ಧಾರೆ
ಒಸರಿತು ಧರೆಗೆ
ಒಂದಲ್ಲ ಹಲವಾರು
ದಿನಗಳ ವರೆಗೆ...

ವಿವಿಧ ಕಾರ್ಯಗಳು
ವಟವಟವಾದವು
ವಟಗುಟ್ಟುವ ಕಪ್ಪೆಗಳೂ
ಹೆದರಿ ಕುಳಿತವು..

ವರುಣನ ವೈಭವ
ಇತರರ ಮರೆಸಿತು
ಕೊಡೆ,ಕೋಟೆಲ್ಲ
ಅಲ್ಲಿಯೇ ಉಳಿಯುತು..

ವರುಷದಿ ಬರುವವ
ವಾರದಿ ಬಂದ
ವಸುಧೆಗೆ ತಂಪಿನ
ಅನುಭವ ತಂದ..

ವದನದಿ ಒಂಥರಾ
ಆನಂದ ತಂದ
ಜಲದಲಿ ಮೀಯಿಸಿ
ಜಯವನು ಪಡೆದ...

ವೃಷ್ಠಿಯ ವೇಗವು
ಜಗದಲೆ ಅದ್ಭುತ
ವಾಹನದಂದದಿ
ನೀರದು ನುಗ್ಗುತ....
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ