ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-2
ಮಳೆಗಾಲ ಬಂತು, ಆಗಾಗ ಮಳೆ ಸುರಿವ ಸಮಯಕ್ಕೆ ತಿನ್ನಲೇನಾದರೂ ಕುರು ಕುರು ತಿಂಡಿ ತಿನ್ನಲಿಕ್ಕಿದ್ದರೆ... ವಾವ್! ಇದಕ್ಕೆಂದೇ ಹಳ್ಳಿಗರು ಹಪ್ಪಳ,ಸಂಡಿಗೆ, ಹಲಸಿನ ಬೀಜ ಇತ್ಯಾದಿ ರೆಡಿ ಬೇಸಿಗೆಯಲ್ಲಿ ಬಿಸಿಲಿರುವಾಗಲೇ ಮಾಡಿ ಒಣಗಿಸಿ, ಬಾಯಿ ಕಟ್ಟಿ ಮಳೆಗಾಲಕ್ಕೆಂದು ಇಟ್ಟುಬಿಡುತ್ತಿದ್ದರು! ಇಂದಿನ ಕುರ್ ಕುರೇ, ಲೇಸ್, ಚಿಪ್ಸ್ ಗೂ ಇದೇ ಬೇಸ್! ಈಗಿನ ಈ ತಿಂಡಿಗಳು ಫ್ಯಾನ್ಸೀ ಇಂಗ್ಲಿಷ್ ಹೆಸರನ್ನು ಹೊತ್ತುಕೊಂಡು, ಆಂಗ್ಲರೇ ಕಂಡು ಹಿಡಿದ ಟೇಸ್ಟ್ ಪೌಡರನ್ನು ಮೆತ್ತಿಕೊಂಡು, ಆರೋಗ್ಯವನ್ನೂ ಹಾಳುಗೆಡಹುವುದಲ್ಲದೆ, ಬಾಯಿರುಚಿ ತಂದು ಹಣವನ್ನೂ ಪೋಲು ಮಾಡಿಸುತ್ತವೆ.
ಹೇಳಿ ಕೇಳಿ ಈಗ ಟೆಕ್ನಿಕಲ್ ಯುಗ ನೋಡಿ! ಎಲ್ಲವೂ ಬೇಗ ಬೇಗನೆ ಆಗಬೇಕು. ತಿನ್ನಲು, ಆರೋಗ್ಯದ ಬಗ್ಗೆ ಗಮನ ಹರಿಸಲು ಯಾರಿಗೂ ಸಮಯವಿಲ್ಲ.. ಇಷ್ಟವಾದ ರುಚಿಯಾದ ಆಹಾರವನ್ನು ಹಸಿವಿಗಾಗಿ ತಿಂದು, ದುಡಿದ ದುಡ್ಡನ್ನೆಲ್ಲ ಡಾಕ್ಟರ್, ಮೆಡಿಸಿನ್ ಗೆಂದು ಸುರಿವ ಕಾಲ ಇದಾಗಿದೆ! ಜನರ ಈ ಗೀಳನ್ನು ಅರಿತೇ ಹಲವಾರು ಮೆಡಿಕ್ಲೇಮ್ ಪಾಲಿಸಿಗಳು ಬೆಳಕಿಗೆ ಬಂದಿವೆ.
ನಮಗೆ ಶಕ್ತಿ ಇರುವಷ್ಟು ಹಣವನ್ನು ಕಟ್ಟಿ ಈ ಪಾಲಿಸಿಗಳಲ್ಲಿ ಹಣ ಕಟ್ಟಿ ನಮ್ಮ ಜೀವಕ್ಕೆ ಹಾಗೂ ನಮ್ಮನ್ನು ನಂಬಿಕೊಂಡವರಿಗೆ ಯಾವುದೇ ತೊಂದರೆ ಆಗದಂತೆ ಅವು ರಕ್ಷಣೆ ಕೊಡುತ್ತವೆ!
ಹಳ್ಳಿಯ ಜೀವನವೇ ರಿಸ್ಕ್ ಇಲ್ಲದ, ದುಡಿತದಲ್ಲೆ ಸುಖ ಕಾಣುವ, ವಿಷವಲ್ಲದ ಊಟ-ಉಪಚಾರಗಳಿರುವ ಬದುಕೇ ಉತ್ತಮ. ಯಾವ ರಗಳೆಗಳಿಲ್ಲದ ಆರಾಮದಾಯಕ ಮಳೆಗಾಲವನ್ನು ಮನೆಯಡಿಗೆಯೊಂದಿಗೆ ನಿರಾತಂಕವಾಗಿ ಕಳೆಯಲು ನಾವೂ ರೆಡಿಯಾಗೋಣವೇ? ನೀವೇನಂತೀರಿ?
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ