ಬುಧವಾರ, ಜುಲೈ 18, 2018

372. ಗಝಲ್-10

ಗಝಲ್

ನನ್ನ ಜೀವದ ಜೀವವೆ ನಿನಗೆ ಸಮನಾರು..
ನನ್ನ ಬದುಕಲಿ ನೆಲೆನಿಂತ ಬೆಳಕಿಗೆ ಸಮನಾರು..

ನನ್ನೊಲವಿನ ಬಳ್ಳಿ ನಿನ್ನ ಆತು ಬದುಕುತಿದೆ
ಮರದಂದದಿ ಬರಸೆಳೆದ ಹೃದಯಕೆ ಸಮನಾರು..

ಮನದಾಳದ ಕಂಪರಿತು ತಂಪೀಯುವ
ಕೊರಳ ಕರೆಯೆ ನಿನಗೆ ಸಮನಾರು...

ಮೈಮನದಲಿ ನಿನ್ನದೇ ಯೋಚನೆಯು ಬರಲು
ಯೋಚನಾ ಲಹರಿಯ ಬಿಂಬದ ಅಪ್ಪುಗೆ ಗೆ ಸಮನಾರು...

ಮನಸೋತ ಹೃದಯಕೆ ಮಣಿದು
ಮನದಲಿ ಮನಸಿಟ್ಟು ಮಧು ತುಂಬಿದ ಮುದ್ದಿಗೆ ಸಮನಾರು?

ಪ್ರೇಮದಿ ಪ್ರೇಮನ ಪ್ರೀತಿಸಿ ಪಡೆದ
ಹೃದಯದ ಪ್ರೀತಿಯ ರಾಜನೆ ನಿನಗೆ ಸಮನಾರು...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ