ಪರಿಚಯದ ಪರಿಸರ
ಪರಿಚಯದ ಪರಿಸರವು
ಪರಿಚಾರಕರ ಪರದೆಯಲಿ
ಪರಿಚಯವಿಲ್ಲದಂತೆ ಪರಿತಪಿಸುತಿದೆ.
ಪಶು-ಪಕ್ಷಿ ಪ್ರಾಣಿಗಳು
ಪರ ಪ್ರಾಣಿ ಮನುಜನಿಂದ
ಪರಕೀಯವಾಗಿ ಬದುಕುತ್ತಿವೆ.
ಪರಿತಾಪ ಹೆಚ್ಚಾಗಿ
ಪರನಿಂದೆಯಿಂದ ಪೆಚ್ಚಾಗಿ
ಪ್ರೇರಕನೆ ಮಾರಕನಾಗಿಹನು.
ಪೇತದಂತೆ ಬಂದಿಹನು
ಪರಕಾಯವಾಗಿಹನು
ಪ್ರೇಮವ ಮರೆತ ಮಾನವನು.
ಪರಿಸರವ ಹಾಳಾಗಿಸಿ
ಪಕಪಕನೆ ಪಗಾರೆಣಿಸಿ
ಪದಕದಲಿ ಗೆದ್ದಿಹನು.
ಪರಪಂಚ ನಾಶಮಾಡಿ
ಪಲ್ಲಕ್ಕಿಯಲಿ ಹೋಗಿ
ಪಂಟನಾಗಿಹ ಮಾನವ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ