ಬೇಧವೇಕೆ?
ಹುಟ್ಟು ಅನಿಶ್ಚಿತ ಸಾವು ನಿಶ್ಚಿತ
ಬಂದುದು ನಿಯತ ಹೋಗು ಖಚಿತ
ಆಗಮನದ ಕೊನೆಗೆ ನಿರ್ಗಮನ ಸತತ
ಬಂದಂತೆ ಹೋಗುವುದು ಅನವರತ...
ಬಂದು ಹೋಗುವ ಕಾರ್ಯದಿ ಸೂತಕವೇಕೆ?
ತಂದೆಗೆ ಸೂತಕ ತಾಯಿಗೆ ಇಲ್ಲ
ತಾಯಿಗೆ ಸೂತಕ ಮಕ್ಕಳಿಗಿಲ್ಲ
ಸೂತಕ ಹೆಸರಲಿ ಕದ್ದು ತಿನ್ನುವುದೇಕೆ?
ತೆಂಗಿನಕಾಯಿ, ಎಣ್ಣೆ ಸೇವಿಸಬಾರದೇಕೆ?
ಮೂರು ದಿಸ ಸಿಹಿ ತಿನ್ನಬಾರದೇಕೆ?
ಹದಿನಾರು ದಿನ ದೇವ ಪೂಜೆ ಮಾಡಬಾರದೇಕೆ?
ಈ ಕಟ್ಟಳೆಗಳ ಮಾಡಿದ್ದೇಕೆ?
ಹುಟ್ಟಿದ ಮಗುವು ಕೇಳಿಹುದೆ?
ಸತ್ತ ತಾತನು ಹೇಳಿಹರೆ?
ವಯಸಿಗೆ ಬಂದ ಹೆಣ್ಣು ಮಗುವಿನ ಸಲಹೆಯೇ?
ಯಾಕೀ ವಿಚಿತ್ರ ಕಟ್ಟುಪಾಡು?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ