ಹಾಗೆ ನೋಡಿದರೆ ದಸರಾ ಮೆರವಣಿಗೆಯಲ್ಲಿ ಪ್ರಾಣಿಗಳಿಗೂ ಉಪದ್ರವೇ.. ಆನೆ, ಕುದುರೆ...
ಪ್ರತಿದಿನ ಲೆಕ್ಕಾಚಾರ ಹಾಕಲು ಹೋದರೆ ಆಫೀಸ್ ವರೆಗೆ ಹೋಗುವುದು ಉಪದ್ರ, ಪುನಃ ಮನೆಯವರೆಗೆ ತಿರುಗಿ ಬರುವುದು ಉಪದ್ರ, ವರ್ಕ್ ಫ್ರಮ್ ಹೋಮ್ ಆದರೆ ಮನೆಯವರ ಉಪದ್ರ, ಸಂಬಳ ಬಾರದೆ ಇದ್ದರೆ ತಿಂಡಿ ತಿನಸಿಗೆ , ಮನೆ ದಿನಸಿ ತರಲು ಮನೆಯವರ ಉಪದ್ರ, ದಿನಕ್ಕೆ ಐದಾರು ಸಲ ಜೋರಾಗಿ ಕೇಳುವ ಬಾಂಗ್ ನ ಸದ್ದು ಕಿವಿಗೆ ಉಪದ್ರ, ನವರಾತ್ರಿಯಲ್ಲಿ ಬಡಿದುಕೊಂಡು ಬರುವ ವಿವಿಧ ವೇಷಗಳ ಶಬ್ಧ, ಕುಣಿತ ,ಹಣಕ್ಕಾಗಿ ಉಪದ್ರ, ದೇವಸ್ಥಾನ, ದೈವಸ್ಥಾನ ಕಟ್ಟಿ. ಪೂಜೆ. ಪುನರ್ ಪ್ರತಿಷ್ಠೆಗಾಗಿ ಹಣ ಸಂಗ್ರಹಣೆಗಾಗಿ ಬರುವವರ ಉಪದ್ರ, ಮನೆಗೆ ಬಂದರೆ ಹೆಂಡತಿ ಮಕ್ಕಳ ಉಪದ್ರ. ಆಫೀಸಿಗೆ ಹೋದರೆ ಮೇಲಧಿಕಾರಿಯ ಉಪದ್ರ, ಹೊರಗೆ ಹೋದರೆ ಟ್ರಾಫಿಕ್, ಸಾಲದವರ ಉಪದ್ರ.ಮನೆಯ ಒಳಗೆ ಸೊಳ್ಳೆಯ ಉಪದ್ರ ಬದುಕೇ ನಡೆವುದು ಈ ಉಪದ್ರದಿoದ..ಇತರರು ಹುಟ್ಟಿದ್ದೇ ಉಪದ್ರ ಕೊಡಲು..ಇದು ಸರ್ವರಿಗೂ ಅನ್ವಯ ಆಗುತ್ತದೆ ಅಲ್ಲವೇ?. ಏನು ಮಾಡೋದು? ಸಹನೆಯೇ ದೇವರು. ನೀವೇನಂತೀರಿ?
@ಹನಿಬಿಂದು@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ