ಶನಿವಾರ, ಡಿಸೆಂಬರ್ 7, 2024

ಕನ್ನಡ ಪದ

ಕನ್ನಡ ಪದ

ಬರಹಕೆ ಭಾಷೆಯು ಎಲ್ಲಿಹುದಣ್ಣ 
ಭಾವವೆ ಮುಖ್ಯ ಆಲ್ವೇನಣ್ಣ?
ಮನದ ಭಾವಗಳ ಹೆಕ್ಕಿ ತೆಗೆಯುತ 
ಸುಂದರ ಪದಗಳ ಮಾಲೆ ಪೋಣಿಸುತ

ಗರಗರ ತಿರುಗುವ ಬುಗರಿಯ ಅಂದದಿ 
ಶ್ರುತಿ ಲಯ ತಾಳಕೆ ಸರಿ ಹೊಂದಿಸುತ
ಕೃತಿ ರಚಿಸಿದ ಕವಿ ಗದ್ಗದಿತ
ತನ್ನೊಡಲ ಕವನದ ನಿಜ ಉದಿತ 

ಭಾವ ಬಳ್ಳಿಯ ಬೀಜ ಮೊಳೆಯಲು 
ಹಾಡಿನ ರೂಪದಿ ಹಣ್ಣಾಗಿ ಬೆಳೆಯಲು
ನಾಲ್ಕಾರು ಹೃದಯ ಓದಿ ತಣಿಯಲು
ಕವಿಯು ಸಾರ್ಥಕತೆ ಪಡೆದು ಬಾಳಲು

ಕನ್ನಡ ಭಾಷೆಯ ಸೊಗಡೆ ಮಧುರ
ಪದಗಳ ಆಟವು ಇಲ್ಲಿ ಹಗುರ
ಭಾವದ ಬಿಂಬವು ಬಹು ಸರಳ
ಸಾಹಿತ್ಯದ ಬಾಳ್ವಿಕೆ ಎಂದೂ ಅಮರ
@ಹನಿಬಿಂದು@
08.12.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ