ನಮನ
ಭಾರತ ಮಾತೆಯೆ ನಿನ್ನನು ನಮಿಸುವೆ
ಕಾಯುತಲಿರುವೆ ನೀ ನನ್ನ//
ಕೈಗಳ ಮುಗಿದು ಚರಣವ ಪಿಡಿದು
ಬೇಡುವೆ ರಕ್ಷಿಸು ಕಂದರನ್ನ//
ಕಾಣದ ಕೈಗಳ ಅವತಾರ ತಡೆ ನೀ
ಮೊರೆಯು ನಿನ್ನಲ್ಲಿ ಕೇಳಮ್ಮ
ಮಾಡಿದ ಕಾರ್ಯಕೆ ಜಯವದು ಸಿಗಲಿ
ಆಶೀರ್ವಾದವ ನೀಡಮ್ಮ//
ಜಯ ಜಯ ಮಾತೆ ಸರ್ವವಿಧಾತೆ
ನಮ್ಮಯ ಪ್ರಾರ್ಥನೆ ನಿನಗಮ್ಮ
ಕರುವನು ಮುಗಿದು ಬೇಡುವೆ ನಿತ್ಯ
ಶಾಂತಿ ಸಹನೆಯ ದಯಪಾಲಿಸಮ್ಮ//
ಚಿನ್ನ ವಜ್ರ ವೈಢೂರ್ಯಕ್ಕಿಂತ
ಆರೋಗ್ಯ ಭಾಗ್ಯವು ಮಿಗಿಲಮ್ಮ
ಬಣ್ಣ ಬಣ್ಣದ ಲೋಕಕ್ಕಿಂತ
ಸತ್ಯದ ಬದುಕದು ಬೇಕಮ್ಮ//
ನಮಿಸುವೆ ತಾಯೆ ಶರಣಾಗಿ ಇಂದು
ನಿನ್ನಯ ಮಕ್ಕಳ ಕಾಯಮ್ಮ
ಉತ್ತಮ ಗಾಳಿ ಶುದ್ಧ ನೀರು
ಒಳ್ಳೆಯ ಆಹಾರ ಸಿಗಲಮ್ಮ//
@ಹನಿಬಿಂದು@
30.07.2026
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ