ಭಾರತಿ ಸುತೆ
ಭಾರತಿಯ ಸುತೆ ಕರುನಾಡ ಮಾತೆ
ಕನ್ನಡ ಭಾಷೆಯ ವೀರತ್ವದ ಗೀತೆ//
ರನ್ನ ಪಂಪ ಪೊನ್ನರ ಜನ್ಮದಾತೆ
ಸರ್ವ ಕವಿ ಪುಂಗವರ ಮೆರೆಸಿದಾತೆ//
ಹಿಂದೂ ಮುಸ್ಲಿಂ ಜೈನ ಕ್ರೈಸ್ತರೆಲ್ಲ
ಜೈನ ಪಾರಸಿಗರೂ ಕೂಡಿ ಕಲೆತರಲ್ಲ//
ಕನ್ನಡ ನುಡಿಯನು ಎದೆಯೊಳಗೆ ಕೆತ್ತಿ
ಕಾಯೇ ತಾಯಿ ನುಡಿಗಳ ಬಿತ್ತಿ//
ಜೇನಿನ ಸಿಹಿಯ ಮಾವಿನ ರುಚಿಯು
ಸುಗ್ಗಿ ನೃತ್ಯದ ಹಸಿರಸಿರ ಗವಿಯು//
ಮಹಾ ವೃಕ್ಷದಂತೆ ವಿಶಾಲ ಹರವು
ಆರೇಳು ಕೋಟಿ ಜನರ ನಲಿವು//
@ಹನಿಬಿಂದು@
04.07.2026
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ