ಕಾವ್ಯವಿರಬೇಕು ಹೀಗೆ
ಕವಲು ಹಾದಿಯಲಿ ಕವನ
ಕವಿಯ ಕರದಿ ನಿಂತು
ಕಲರವದಿ ಕಲಕಿ ಕೈಜಾರಿ
ಕುದಿದು ಬರಹ ರೂಪದಿ ಬಿದ್ದಂತೆ .
ಕಾನನದ ಹಸಿರ ಹೂವೊಂದು
ಹಾಯಾಗಿ ಹಲಸಿನ ಮರವ ಆತು
ಹಲವಾರು ದಿನ ಹಸಿವಿಲ್ಲದೆ
ಮಲಗಿ ನೆಮ್ಮದಿಯಲಿ ನಿದ್ರಿಸಿದಂತೆ,
ಹಯನ ಓಡುವ ವೇಗದ ಮುಂದೆ
ಹಲವಾರು ಜೀವಿಗಳು ಸೋತು
ಹರಸಿ ಹಿಂದೆ ನೆಗೆದು ಅವನ
ಮುಂದೆ ಸಾಗಲು ಹುರಿದುಂಬಿಸಿದಂತೆ
ಕಪ್ಪೆಂದು ತಿಳಿದ ಕರಾಳ ಬದುಕಿಗೆ
ಕೈಹಿಡಿದು ನಡೆಸಲು ಬಂದ
ಬದುಕಿನ ದೊರೆಯ ವಿಶ್ವಾಸದ
ನುಡಿಗಳ ಮಾರ್ದನಿಯ ಪದದಂತೆ
ರವಿಯೀವ ಹೊಂಬಣ್ಣದ ಕಿರಣಗಳು
ಹೊಂಬಾಳೆಗೆ ಹೂಮುತ್ತನಿಟ್ಟು
ಹಟಮಾಡಿ ಮುಂದಾಗಿ ಮುಂದಡಿಯಿಟ್ಟು
ವನವೆಲ್ಲ ಒಂದಾಗಿ ಮಿಂಚು ಹೊಳೆದಂತೆ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ