ಮಂಗಳವಾರ, ಜುಲೈ 10, 2018

360. ಹನಿಗವನಗಳು

1.ಮನೆ

ಊರು ಒಳ್ಳೆಯದಾಗಬೇಕು
ಜನತೆ ಚೆನ್ನಾಗಿರಬೇಕು
ಎಂಬ ಯೋಚನೆ ಬರಲು
ನಮ್ಮ ಮನೆ -ಮನ ಸರಿಯಾಗಿರಬೇಕು...
ನಾ ಸರಿಯಾಗಲು
ದೇಶ ಸರಿಯಾದೀತು...

2. ಹೆಣ್ಣು
ಪ್ರಕೃತಿ,ದೇಶ ಭೂಮಿ
ಎಲ್ಲವ ದೇವತೆಯೆಂದು
ಪೂಜಿಪ ನಮಗೆ
ತಾಯಿ ಬೇಕು ಮಡದಿ ಬೇಕು
ಹೆಣ್ಣು ಮಗುವೇತಕೆ ಬೇಡ?

3. ಮಾತೆ
ಜಗನ್ಮಾತೆ ಮಕ್ಕಳ ಬಾಳಿನ
ಪೋಷಕಿ, ಪಾಲಕಿ
ಜನನಿ ಗುರುವು
ಭವಿಷ್ಯದ ನಿರೂಪಕಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ