ಗಝಲ್
ನೆನಪ ತರುವುದು ನಿನ್ನ ತುಂತುರಿಸುವ ಮಳೆ
ತನುವ ತಂಪಾಗಿಸಿಹುದು ಉದುರುವ ಮಳೆ...
ಹನಿಹನಿಯು ಮುತ್ತಿನಂತೆ ಬೀಳುತಲಿರಲು
ನಿನ್ನ ಕೈಹಿಡಿದು ಹೋಗುವ ಅನುಭವ ಹೊತ್ತೊಯ್ಯುವ ಮಳೆ...
ಹಗಲಿರುಳು ಬೆಂಬಿಡದೆ ಸುರಿದು
ನಿನ್ನಂತೆಯೇ ಸೋನೆಯಾಗಿ ಕಾಡುವ ಮಳೆ...
ಉದುರುದುರು ಸುರಿಯುತ್ತಾ ನೀರ ಚೆಲ್ಲುತ್ತ
ನಿನ್ನಂತೆ ಕಣ್ಣಲ್ಲೆ ಮುದ್ದಾಗಿ ನಗುವ ಮಳೆ..
ತಂಪು ತಂಗಾಳಿಯೊಡನೆ ಬಂದು
ತಂಬೆಲರ ತಣಿಸಿ ಭುವಿಗೆ ಇಣುಕುವ ಮಳೆ
ಇಳೆಯ 'ಪ್ರೇಮ'ವು ಉಕ್ಕಿ ಹರಿದು
ಜಲಧಾರೆಯಾಗಿ ಭುವಿಗೆ ತವಕಿಸುವ ಮಳೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ