ಸೋಮವಾರ, ಜುಲೈ 16, 2018

367. ಗಝಲ್ -13

ಗಝಲ್
ಮನದಾಳದ ಬಯಕೆಗಳ ಬಿಚ್ಚಿಡಲಾಗದು ಏಕೆ?
ಮನದಿಂಗಿತವ ಸರಿಯಾಗಿ ಬಳಸಲಾಗದು ಏಕೆ?

ಮರ್ಕಟವೆಂಬ ಮನ ಅತ್ತಿಂದಿತ್ತ ಸುಳಿವಾಗ
ಅದ ನಮ್ಮೊಳಗೆ ಹಿಡಿದಿಡಲಾಗದು ಏಕೆ?

ಮನದ ಕದ ತೆರೆದು ಒಳಗಿಣುಕವ
ಕಣ್ಗಳಲಿ ಕಾಂತಿಯ ಕಾಣಲಾಗದು ಏಕೆ?

ಎದೆಯುದಕ ಚಿಮ್ಮುತಲಿ ನೆಗೆವಾಗ
ಏದುಸಿರು ಬಿಡುತ ಕರೆಯಲಾಗದು ಏಕೆ?

ನಂಜಾದ ಮಂಜಿನ ಹನಿ ಬಂದು
ನಿಂದು
ನಕ್ಕಾಗ ನಿನ್ನ ನೆನಪಾಗುವುದು ಏಕೆ?

ಪ್ರೇಮದರಗಿಣಿಯ ಒಡಲಾಳ ತಿಳಿದಾಗ
ಮನ ಕುಣಿದು ಹಾರುವುದು ಏಕೆ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ