ಗಝಲ್
ಮುದವ ನೀಡುತ ಹಿತವ ಬಯಸುತಿದೆ ಮನ
ನಲಿವ ಬಯಸುತ ನೋವ ಮರೆಯುತಿದೆ ಮನ..
ಮೌನದರಮನೆಯ ಸುಖವ ಸವಿದು ತಾ
ಮಾತಿನ ಮನೆಯ ಬೀಗ ಮುರಿದಿದೆ ಮನ..
ವರವ ಬೇಡುತಲಿ ಬಳಲಿ ಬೆಂಡಾಗುತಲಿ
ಮೋಹದ ಬೆರಗು ಮೂಡಿಸುತಲಿದೆ ಮನ..
ವಿರಹದುರಿಯಲಿ ಉರಿಯುತುರಿಯುತಲಿ
ಜೇನ ಹನಿಯನು ಮತ್ತೆ ಹುಡುಕುತಿದೆ ಮನ...
ಪ್ರೇಮದೊಲುಮೆಯ ಕನಸು ಕಾಣುತಲಿ
ನವಜೀವಭಾವವ ಅರಳಿಸುತಲಿದೆ ಮನ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ