ಮಲ್ಲಿಗೆ
ಬಾಳಿಗೆ ಕಂಪ ತಂದ ಮಲ್ಲಿಗೆ ನೀ ಹೋದೆಯೆಲ್ಲಿಗೆ?
ಪಟ್ಟಣದ ಪೇಟೆಗಾ? ಗಾಡಿಯ ಕೂಟಕಾ?
ಹಳ್ಳಿ ಹೆಂಗಸಿನ ಮುಡಿಗೇರಿ ಕುಳಿತೆಯಾ?
ದೇವಾಲಯದ ಮೂರ್ತಿಯ ಮೇಲೆ ಮೆರೆದೆಯಾ?
ನಿನ್ನ ಅಚ್ಚ ಬಿಳಿಯ ವರ್ಣ ನೋಡಿ ಮರುಳಾದೆ!
ನಿನ್ನ ಘಮಘಮ ಪರಿಮಳ ನೋಡಿ ಬೇಕೆಂದೆ!
ನಿನ್ನ ಆ ಆಹ್ಲಾದ ಕಂಡು ನಾನು ಬೆರಗಾದೆ!
ನನ್ನ ಬಿಟ್ಟೆಲ್ಲಿ ಹೋದೆಯಾ ಜೀವದ ಗೆಳತಿ ನೀ....
ಬಿಳಿಯ ದಾರವು ನಿನ್ನ ಸೊಂಟವ ಹಿಡಿದಿದೆ!
ನೀ ಜೊತೆಯಾಗಿ ನನ್ನ ಬಿಟ್ಟು ಸಾಗಿದ್ದೆಲ್ಲಿಗೆ!
ಒಂದೆ ದಿನ ಬದುಕುವೆನಾದರೂ ನಿನ್ನಂತಿರಲಾಸೆ!
ಹಲವರಿಗೆ ಕಂಪ ಪಸರಿಸಿ, ಹಲವರಲಿ ನಗು ಉಕ್ಕಿಸಿ!
ಮನದಾಳದಲಿ ಮಲಗಿ ಮುದ ನೀಡುವೆ ಮಲ್ಲಿಗೆ!
ಮನದೊಳಗೆ ಮೂಗೊಳಗೆ ಪಸರಿಸಿಹೆ ಬೆಳ್ಳಗೆ!
ನಿನ್ನಿಂದ ಆನಂದ ನೀಡಿರುವೆ ಸದಾ ಜನಕೆ!
ಗಿಡಕೂ, ಮುಡಿಗೂ, ನೂಲಿಗೂ ಏರಿಸಿದೆ ದೈವತ್ವಕೆ...
@ಪ್ರೇಮ್@
ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ , ದಕ್ಷಿಣ ಕನ್ನಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ