ಶನಿವಾರ, ಮೇ 11, 2019

1008. ರಾಯರ ಮಣ್ಣಿದು...

ರಾಯರ ಪುಣ್ಯ ಮಣ್ಣಿದು...

ರಾಯರ ಪುಣ್ಯದ ಮಣ್ಣಿದು!
ಭಕ್ತಿಯ ಸಂಪೂರ್ಣ ಮೆರೆದಿಹುದು!
ಭಾವನೆ ಸಕಲವ ಬೆರೆಸಿಹುದು!
ಸಕಲ ಜೀವಿಗೆ ಪ್ರೀತಿಯ ವರ್ಷ ಸುರಿಸಿಹುದು//

ಭಕುತರ ಪಾಲಿಗದು ಪುಣ್ಯ ಕ್ಷೇತ್ರವು..
ಕೊಡುವುದು ಶಾಂತಿಯ ಪ್ರತಿ ಹೆಜ್ಜೆಯೂ..
ರಾಯರು ಕಣ್ ಬಿಟ್ಟು ನೋಡುವ ಅನುಭವ,
ಗುರುಗಳ ಕೃಪೆಯದು ಹೃದಯದಿ ಸವಿಭಾವ//

ಮೃತ್ತಿಕೆ, ಅಕ್ಷತೆ, ಹೂವಿನ ಪ್ರಸಾದ
ಕುಂಕುಮ, ಪರಿಮಳ ಮೆಲ್ಲುತ ನಡೆದ!
ರಾಯರ ಕಣಕಣದುಸಿರೆ ಬೃಂದಾವನ!
ಸಿಗುವುದು ನಮಗೆ ರಾಯರ ದರುಶನ//

ಮಾರುತಿ ಎದುರಲಿ ರಾಯರ ಐಕ್ಯವು,
ಗೆಳೆಯರ ಜತೆಗಿರಿ ಎನ್ನುವ ಸಾರವು!
ಮನೆ ಮನ ಬೆಳಗುವ ರಾಘವೇಂದ್ರ ಸ್ವಾಮಿಯು,
ಭಕ್ತಿಯಲಿ ಬೇಡಿದರೆ ವರಗಳ ಲೀಲೆಯು//

ಬೃಂದಾವನಕೆ ಬನ್ನಿರಿ ಭಕುತಿಯಲಿ,
ರಾಯರ ದರುಶನ ಪಡೆಯಿರಿ ನೀತಿಯಲಿ,
ಧನ್ಯತಾ ಭಾವವು ಸಿಗಲಿದೆ ನಿಮಗೆ
ಹರಸುತ ಕುಳಿತಿಹರು ಮಂಚಾಲಮ್ಮ ನಮಗೆ//
@ಪ್ರೇಮ್@
12.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ