ನೀ..ನೀ..
ನೀ ನೀನೆಂದರೆ ನಾ..ನಾ..ಇರುವೆನು!
ನೀನೇ ನಾನು, ನಾನೇ ನೀನು ಬೇರೆನು?
ನೀ ನನಗಾದರೆ, ನಾ ನಿನಗಾಗಿಹೆ
ನಾನಾವಾಗಲು ನಿನಗಾಗೇ ಮೀಸಲಾಗಿಹೆ...
ನನ್ನದೆಲ್ಲವ ನಿನ್ನದೆನ್ನದೆ ಮತ್ತೇನೆನಲಿ?
ನಿನ್ನ ಬಿಟ್ಟು ಭುವನದಲಿ ಹೇಗಿರಲಿ?
ನನ್ನನಾಳುವ ಮನವು ನೀನಾಗಿರಲು
ನಿನ್ನದೆನದಿರಲು ನನ್ನಲೇನಿಹುದು ಬದಲು?
ನಮ್ಮಿಬ್ಬರಲಿ ಎಂದೂ ಬರದು
ನಿನ್ನ ನನ್ನದೆಂಬ ನವಭಾವ!!
ಅದೆಂದಿಗೂ ನಮ್ಮದೆಂಬ ಆಡಂಬರವಿರದ ಅಹಂ ಇರದ ಭಾವ!
ನೀನಿಟ್ಟ ಹೆಜ್ಜೆಯಲಿ ನಾನಿರುವೆ
ನಾ ಸಾಗುವ ದಾರಿಯಲಿ ನೀನಿರುವೆ!
ನಿನ್ನಾತ್ಮವು ಪರಮಾತ್ಮವಾಗಿರಲು
ನನ್ನಾತ್ಮವು ನಿನ್ನಾತ್ಮವೇ ಆಗಿಹುದು!
ನನ್ನ ನೀನು, ನಿನ್ನ ನಾನು ತಿಳಿದಿರಲು
ಬದುಕ ನೌಕೆ ಹಿತವಾಗಿ ನಿನ್ನೊಂದಿಗೆ ಸಾಗಿರಲು..
ನಾನೇ ನೀನು ನೀನೇ ನಾನು ತಾನೇ?
@ಪ್ರೇಮ್@
21.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ