ಬುಧವಾರ, ಮೇ 8, 2019

998. ನಾ ಬಂದೆ

ನಾ ಬಂದೆ

ಭೂಮಿಗೆ ನಾ ಬಂದೆ, ಅಮ್ಮನ ಹೊಟ್ಟೆಯಿಂದಾಚೆ
ನೆಗೆದೊಡನೆ ಅಮ್ಮನಿಗೆ ಅಳುತ್ತಾ ಹೇಳಿದೆ!
ನನ್ನ ಮೊದಲ ಮುಖತಃ ಭೇಟಿ
ಅವಳಲ್ಲಿ ನೋವು-ನಗುವಿನ ಪುಳಕ!
ಅಷ್ಟು ದಿನ ಒದಿಸಿಕೊಂಡು ಖುಷಿಪಡುತ್ತಿದ್ದಳು!
ಈಗ ಅಳು ಕಂಡು ನಕ್ಕಳು!
ನನಗೆ ತಿಳಿದಿರಲಿಲ್ಲ ಮುಂದೆ ನನ್ನಿಂದಾಗಿ ಅಳುವಳೆಂದು!

ನಾನೇನು ಕೊಟ್ಟೆ ಅವಳಿಗೆ
ನಗು-ಅಳುವಿನ ಹೊರತಾಗಿ?
ಜನ್ಮ ಕೊಟ್ಟೆನೇ, ತಂಪಾಗಿ ಸಲಹಿದೆನೇ?
ಮನೆ, ಬಂಗ್ಲೆ, ಕಾರು, ನೆಮ್ಮದಿ?
ಅದಿರಲಿ, ಅವಳಿಗೆ ಬೇಕಾದ ಸಂಪತ್ತು?

ಬೇಕಾದ್ದನ್ನೆಲ್ಲ ಕಿತ್ತು, ಕೇಳಿ ಪಡೆದು
ನನ್ನ ಕಾಲ ಮೇಲೆ ನಿಂತಾಗ
ಮಡದಿಯ ರೂಪ, ಪ್ರೀತಿ ಕಂಡು
ಅಮ್ಮ ನಗಣ್ಯಳಾದಳು ನನಗೂ,
ಪ್ರತಿ ಮಗುವಿಗೆ ಮಾಡಿದಂತೆ
ತನ್ನ ಕರ್ತವ್ಯ ಮಾಡಿದಳೆಂದೆ!

ಅವಳ ನೋವು, ಸಂಕಟ ನನಗಿರಲಿಲ್ಲ
ನನ್ನ ಮಗ ನನ್ನ ದೂರಮಾಡಿದಾಗ
ನನ್ನ ಪರರಂತೆ ಕಂಡಾಗ ತಿಳಿಯಿತು!
ತಲೆಗೆ ಸುರಿದ ನೀರೇ ಕಾಲಿಗಿಳಿವುದು!
ನನ್ನಿರವು ನನ್ನ ಮಗನಿಗೆ ಸಂಕಟವೆನಿಸುವುದು!
@ಪ್ರೇಮ್@
07.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ