ಮರೆಯಾದರೂ ಮರೆಯಲಾಗದ್ದು-ಕವನ
ಅಜ್ಜಿಯ ನೆನಪು
ಹಗಲಿಡಿ ತೋಟದಿ ದುಡಿದ ಬಳಿಕ
ಕತ್ತಲೆಯಾದೊಡೆ ಬೆಂಕಿಯ ಹೊತ್ತಿಸಿ
ಬಿಸಿಬಿಸಿ ನೀರಲಿ ಸ್ನಾನವ ಮಾಡಿ
ಒಲೆಯಲಿ ಮಣ್ಣಿನ ಪಾತ್ರೆಯ ಅಡಿಗೆಯ ನೋಡಿ!
ತೋಟದಿ ಬೆಳೆದಿಹ ತರಕಾರಿ ತಂದೋ
ವಾರದ ಕೊನೆಯಲಿ ಒಣ ಮೀನನು ಸುಟ್ಟೋ
ಮನೆಯದೆ ಕೋಳಿಯ ಕುತ್ತಿಗೆ ಮುರಿದೋ
ಮನೆಯಲೆ ಬೆಳೆದ ಅಕ್ಕಿಯ ರುಚಿಯೋ
ಏನಿಲ್ಲದಿರೂ ಉಪ್ಪು ಹುಳಿ ಮೆಣಸು
ರುಚಿಯೇ ರುಚಿಯು ಅಜ್ಜಿಯ ಪಾಕವು
ನಮ್ಮಯ ಕುರ್ ಕುರೆ ಬಿಸ್ಕೆಟ್ ಬದಿಗೆ
ಯಾರೂ ಬರರು ಅಜ್ಜಿಯ ಪಾಕದ ಎದುರಿಗೆ!
ಕಟ್ಟಿಗೆ ತಂದು ಒಲೆಯನು ಉರಿಸುತ
ತೆಂಗಿನ ಒಣಗರಿ ಬೆಂಕಿಯ ಹಚ್ಚಲು
ಮನೆಯೊಳಗೇ ಒಲೆ ಚಳಿಯನು ಕಾಯಿಸೆ
ನಾಲ್ಕು ಗಂಟೆಗೆ ಎದ್ದು ನಳಪಾಕ ತಯಾರಿಸೆ
ಅಜ್ಜಿಯೂ ಇಲ್ಲ ಒಲೆಯೂ ಇಲ್ಲ
ಆಗಿನ ರುಚಿಯಂತೂ ಇಲ್ಲವೆ ಇಲ್ಲ,
ಮರೆಯಾದರೂ ನಾವು ಮರೆವೆವು ಹೇಗೆ
ಅಜ್ಜಿಯ ಕೈರುಚಿ ಇತ್ತದು ಹಾಗೆ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ