ಬೇಕೇ..
ಗಿಡದಲ್ಲಿ ನಗುತಿದ್ದ
ಬಳ್ಳಿಯಲಿ ಅರಳಿದ್ದ
ತರುಲತೆಗಳಲಿ ಬೆಳೆದಿದ್ದ
ಹಣ್ಣುಗಳ ಹಿಡಿದಿದ್ದ
ಮಾತೆ ಬರುತಿಹಳು
ಬೇಕಿಹುದೆ ನಿಮಗೆ?
ದೇವರ ಪೂಜೆಗಿರಬಹುದು
ಬಂಧುವಿನ ನೆರವಿಗಿರಬಹುದು
ರೋಗಿಗೆ ಆಹಾರವಾಗಿರಬಹುದು
ಅತಿಥಿಗೆ ಉಡುಗೊರೆಯಾಗಿಹುದು
ಆರೋಗ್ಯದ ಮೂಲವಾಗಿಹುದು..
ಕೃಷಿಕರ ಸ್ವತ್ತಾಗಿಹುದು
ರಾಸಾಯನಿಕದಿಂದ ಮುಕ್ತವಾಗಿಹುದು
ಕೈಲೆ ಕುಳಿತಿಹುದು
ಬರಲು ಕಾದಿಹುದು!
ದಾನದ ಗುಣವಿಹುದು
ಪ್ರೀತಿಯ ಮನವಿಹುದು
ಬದುಕಿನ ಅನುಭವವಿಹುದು
ಸಂಸ್ಕೃತಿಯ ಕುರುಹಿಹುದು...
ಬನ್ನಿ ನಮ್ಮತನ ಉಳಿಸೋಣ
ಭಾರತೀಯತೆ ಮೆರೆಸೋಣ
ಅತಿಥಿಗಳ ಸತ್ಕರಿಸೋಣ
ಕೃಷಿಕರ ಗೌರವಿಸೋಣ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ