ಶನಿವಾರ, ಮೇ 25, 2019

1023. ಅಮ್ಮ

(ನಗುವ ಗುಲಾಬಿ ಹೂವೆ...ಈ ಹಾಡಿಗೆ ಸರಿಹೊಂದುವ ರಾಗಕ್ಕೆ ಬರೆದ ಗೀತೆ....)

ನನ್ನಮ್ಮ..

ನಗುವ ಗುಲಾಬಿ ತಾಯೇ...
ಚಿಂತೆಯಾ ಬಿಟ್ಹಾಕಿ ಬದುಕೀ..
ನನ್ನಯ ಬದುಕೆಂದು ನಿಮಗೆ..
ಅರ್ಪಿಸುತಲಿ ನಾ ನಿತ್ಯ ಕುಣಿವೆ...

ಸಿರಿಯ ನೀವ್ ಬೇಡಲಿಲ್ಲ,
ಮಕ್ಕಳ ನೀವ್ ತೊರೆಯಲಿಲ್ಲ,
ಮಕ್ಕಳ ಬದುಕಿಗೆ ತನ್ನಯ ಬಾಳನು ಮುಡಿಪಾಗಿರಿಸಿದಿರಿ..
ಕಷ್ಟವನು ಸಹಿಸುತಲಿ..ನೋವನ್ನೂ ನುಂಗುತಲಿ
ಪತಿಯನೆ ಪರದೈವ ಎನ್ನುತ ಬಾಳುವ... ವರವಾಗಿ ..ನಗುವಾಗಿ../ನಲಿವ/

ನಿಮಗಾಗಿ ದೇವರನ್ನ  ಕೇಳಿಲ್ಲ,
ಮಕ್ಳಿಗೆ ಕೇಳೋದ ಮರೀಲಿಲ್ಲ,
ಮಕ್ಕಳ ಬದುಕಲೆ ತನ್ನಯ ಸಂತಸ
ಕಾಣುತ್ತ ಬೆಳೆಸಿದಿರಿ, ವಿದ್ಯೆಯನು ಸುರಿಸಿದಿರಿ..
ಮಕ್ಕಳ ಬಾಳದು ಹಸನಾದುದ ಕಂಡು
ಸಂತಸದಿ ...ಬೀಗಿದಿರಿ...
ಆನಂದದಿ...ನಲಿದಾಡಿದಿರಿ..
ಮಕ್ಕಳೆ ನನ್ನಯ ಬದುಕು ಎನುತ ಸಾಗುತ್ತಾ..ಮುಂದೆ ಸಾಗುತ್ತ.../ನಲಿವ/

ಇತರರ ನೀವ್ ಬೇಡಲಿಲ್ಲ, ನೆಂಟರ ನೀವ್ ಕೇಳಲಿಲ್ಲ..
ಹಗಲಲಿ ಇರುಳಲಿ ಕೂಲಿಯ ಮಾಡಿ
ಬೀಡಿಯ ಕಟ್ಟುತ, ಕಷ್ಟವ ನುಂಗಿ
ಬೆಳೆಸುತ್ತಾ...ಓದಿಸುತ್ತ..
ಮಕ್ಕಳೆ ನಮ್ಮಯ ದೇವರು ಎನುತ
ಬಾಳುತಲಿ...ನಗುನಗುತ್ತ...
ಕಷ್ಟವ ಮೆಟ್ಟುತ, ಸುಖದಲಿ ಹಿಗ್ಗದೆ
ಬಾಳಿನ ಮರ್ಮವ ನಮಗೆ ಕಲಿಸಿದಿರಿ...ಕಲಿಸುವಿರಿ.../ನಲಿವ/

@ಪ್ರೇಮ್@
25.05.2019
ಗುಲಾಬಿ=ಅಮ್ಮನ ಹೆಸರು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ