ಹನಿಗಳು..
1. ಮುತ್ತು
ಒಂದು ಮುತ್ತು ಕೊಡು
ಎಂದ ಅವನು!
ಮುತ್ತಿನ ಹಾರ ಮೊದಲು
ತಂದು ಕೊಡೆಂದಳು ಅವಳು!!
2. ಚಿನ್ನ
ನೀ ನನ್ನ ಜೀವನದ ಬಂಗಾರ,
ಮುದ್ದು ಚಿನ್ನವೆಂದು ರಮಿಸಿದ!
ಮೊದಲು ಬರಲಿ ಒಂದು ತೊಲ
ಚಿನ್ನವೆನುತ ಜಾಡಿಸಿ ಓಡಿದಳು!!
3. ಬೆಳ್ಳಿ
ಮಾತು ಬೆಳ್ಳಿ, ಮೌನ ಬಂಗಾರ!
ಹಿರಿಯರ ಅನುಭವದ ಮಾತು!
ಕಿರಿಯರು ಶಿರಸಾ ಪಾಲಿಸುತಲಿರುವರು!
ಮೊಬೈಲ್ ಹಿಡಿದು ಮನೆಯಲಿ ಮೌನವಾಗಿ!!
4. ವಜ್ರ
ನಾನು ವಜ್ರದಂತೆ ಕಠಿಣ!
ಅಪ್ಪ ಗುಡುಗಿದ ಮನೆಯಲ್ಲಿ!
ನಾ ಗಾಜಿನಂತೆ ಬಹಳ ತೀವ್ರ
ಅಮ್ಮ ಮೆಲ್ಲನೆನುತಿದ್ದಳು ಅಡಿಗೆ ಕೋಣೆಯಲ್ಲಿ!!
5. ಹವಳ
"ನಲ್ಲೆ ನಿನ್ನ ತುಟಿ ಹವಳ!"
ಅಂದವಗೆ ಕೆನ್ನೆಗೆ ಬಿತ್ತು ರಸಗವಳ!!
"ಮುಸುಡಿ ನೋಡು, ಒಂದು ತುಂಡು
ಹವಳ ತರಲು ಗತಿಯಿಲ್ಲ!
ಹವಳವಂತೆ ಹವಳ!!"
@ಪ್ರೇಮ್@
6. ಪ್ಲಾಟಿನಮ್
ನಲ್ಲೆ ನಮ್ಮ ಪ್ರೀತಿ
ಪ್ಲಾಟಿನಮ್ ತರಹ
ಇರಬೇಕು ದುಬಾರಿಯಾಗಿ!
ಅದು ಬೇಡವೋ ನಲ್ಲ!
ಅದಿರುವುದು ಕಪ್ಪು ಕಪ್ಪಾಗಿ!!!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ