ಗುರುವಾರ, ಮೇ 30, 2019

1021. ಏಕಮ್ಮಾ

ಏಕಮ್ಮಾ

ಸಂಜೆಯು ಆಗಲು ಸೂರ್ಯನು
ಪಶ್ಚಿಮಕೋಡುವ ಏಕಮ್ಮ?
ಓಡುತ ಅಲ್ಲಿ ಕಡಲಲಿ ಮುಳುಗುವ
ಸೆಕೆಯು ಅವನಿಗೂ ಉಂಟೇನಮ್ಮಾ?

ಹಳದಿಯ ಮರೆತು ಕೇಸರಿ ಬಣ್ಣವ
ರವಿಯು ಹೇಗೆ ಪಡೆಯುವನಮ್ಮಾ?
ತನ್ನಯ ಬಣ್ಣವ ಹೊರಗಡೆ ಉಗುಳುತ
ಆಗಸಕೂ ಅದ ಸುರಿಯುವನಮ್ಮ!

ಗೋಲಿಯ ಹಾಗೆ, ಚೆಂಡಿನ ಹಾಗೆ
ದುಂಡಗೆ ಭಾನುವು ಏಕಮ್ಮಾ?
ಚಂದ್ರನ ಹಾಗೆ ಅರ್ಧ, ಕಾಲು
ಸೂರ್ಯನು ಕಾಣುವುದಿಲ್ಲಮ್ಮ!

ಬೆರಗಲಿ ನಾನು ನೋಡುತಲಿರುವೆ
ಚಂದ ಮಾಮ ರಾತ್ರಿಯಲಿ,
ಹಗಲಲಿ ಬರುವ ರವಿಮಾಮನನು
ಕಣ್ಣು ಬಿಟ್ಟು ನೋಡಲಾರೆ ಏಕಮ್ಮ?
@ಪ್ರೇಮ್@
25.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ